24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ: ಮಕ್ಕಳು ಇಲ್ಲದ ಕೊರಗು; ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

ಮುಂಡಾಜೆ : ಇಲ್ಲಿಯ ಕೊಡಂಗೆಯಲ್ಲಿ ಮಹಿಳೆ ಮಕ್ಕಳು ಇಲ್ಲದ ಕೊರಗಿನಲ್ಲಿ ರಬ್ಬರ್ ಹಾಲಿಗೆ ಬೆರೆಸುವ ಆಸಿಡ್ ಸೇವನೆ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.12 ರಂದು ನಡೆದಿದೆ.

ಮುಂಡಾಜೆ ಕೊಡಂಗೆ ಮನೆ, ರಾಘವ ಗೌಡರವರ ಪತ್ನಿ ರಾಧಾರವರು ಮನೆಯಲ್ಲಿಯೇ ಇದ್ದು ಬೀಡಿ ಕಟ್ಟುವ ಕೆಲಸ ಮಾಡಿಕೊಂಡಿದ್ದವರು ಮಕ್ಕಳಾಗದ ವಿಚಾರದಲ್ಲಿ ಆಕೆ ಬಹಳ ನಿರಾಶೆ ಮತ್ತು ಬೇಸರದಿಂದ ಇದ್ದವರು ಕೆಲವು ಸಮಯದಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು ಮಾನಸಿಕವಾಗಿ ತೀರಾ ನೊಂದುಕೊಂಡಿದ್ದರು. ಮಾ.12 ರಂದು ಮಧ್ಯಾಹ್ನ ರಾಘವ ವಿಶ್ರಾಂತಿಗೆಂದು ಮಲಗಿದ್ದು ಸಂಜೆ ಸುಮಾರು 4 ಗಂಟೆಯ ಸಮಯಕ್ಕೆ ರಾಧಾರವರು ಹೊರಗಿನಿಂದ ರಾಘವರವನ್ನು ಕರೆದು ತಾನು ರಬ್ಬರ್ ಹಾಲಿಗೆ ಬೆರೆಸುವ ಆಸಿಡ್ ಸೇವನೆ ಮಾಡಿದ್ದಾಗಿ ತಿಳಿಸಿದ್ದು ಕೂಡಲೇ ಆಕೆಯನ್ನು ಆಟೋರಿಕ್ಷಾದಲ್ಲಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವುದರಿಂದ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ರಾಧಾರವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು.ಡಿ.ಆರ್ 21/2024 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ : ಎನ್ ಐ ಎ ತನಿಖೆಯ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ

Suddi Udaya

ಕಡಿರುದ್ಯಾವರ: ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎಸ್.ಎಸ್.ಎಲ್.ಸಿ. ಫಲಿತಾಂಶ: ಧರ್ಮಸ್ಥಳದ ಆಂಗ್ಲಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಉಜಿರೆ ರಬ್ಬರ್ ಸೊಸೈಟಿಗೆ ಅಪೋಲೋ ಗೋಲ್ಡ್ ಪಾರ್ಟ್ನರ್ ಅವಾರ್ಡ್

Suddi Udaya

ಅಂಡಿಂಜೆ: ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ 27 ನೇ ವರ್ಷದ ವಿಶ್ವಕರ್ಮ ಪೂಜೆ

Suddi Udaya
error: Content is protected !!