ಉಜಿರೆ: ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಉಜಿರೆ : ಇಲ್ಲಿನ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ಉಜಿರೆಯ ಎನ್ ಎಸ್ ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕದ ಸಹಭಾಗಿತ್ವದಲ್ಲಿ ಎಸ್ ಡಿ ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯ ಆಶ್ರಯದಲ್ಲಿ ಮಂಗಳೂರು ರೆಡ್ ಕ್ರಾಸ್ ರಕ್ತ ನಿಧಿ ಘಟಕದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮಾ.14ರಂದು ನಡೆಯಿತು.


ಈ ಶಿಬಿರದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ನ ಪ್ರಾಂಶುಪಾಲರಾದ ಸಂತೋಷ್ ಇವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸಾತ್ವಿಕ್ ಜೈನ್ ಉದ್ಘಾಟಿಸಿ ಶುಭಹಾರೈಸಿ ರಕ್ತದಾನದ ಮಹತ್ವವನ್ನು ವಿವರಿಸಿದರು. ಈ ಸಮಾರಂಭದಲ್ಲಿ ಎಸ್ ಡಿ ಎಂ ಆಸ್ಪತ್ರೆಯ ಪ್ರಯೋಗಾಲಯದ ಅಧಿಕಾರಿ ಶಿತಿಕಂಠ ಭಟ್‌, ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರಿನ ಸಂಯೋಜಕರಾದ ಪ್ರವೀಣ್ ಕುಮಾರ್ , ಯುವ ರೆಡ್ ಕ್ರಾಸ್ ಘಟಕ ಯೋಜನಾಧಿಕಾರಿಗಳಾದ ಅವನೀಶ್ ಪಿ. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಯಾದ ಪ್ರಕಾಶ್ ಹಾಗೂ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ನ ಭೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Comment

error: Content is protected !!