23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ: ಧ್ವಜಾರೋಹಣ

ಪೆರಿಂಜೆ: ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.14 ರಿಂದ ಪ್ರಾರಂಭಗೊಂಡು ಮಾ.19ರವರೆಗೆ ನಡೆಯಲಿದೆ.

ಮಾ.14 ರಂದು ಮೀನ ಸಂಕ್ರಮಣದಂದು ಮಧ್ಯಾಹ್ನ ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಅಮ್ಮನವರಿಗೆ ವರಹ ಪೂಜೆ, ರಾತ್ರಿ ಪಡ್ಡ್ಯೋಡಿಗುತ್ತಿನಲ್ಲಿ ಉಪಹಾರ ರಾತ್ರಿ ಪಡ್ಡ್ಯೋಡಿಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿದು, ಪಡ್ಡ್ಯಾರಬೆಟ್ಟಕ್ಕೆ ಆಗಮನ, ಧ್ವಜಾರೋಹಣ, ಬಲಿ, ಚೆಂಡು ನಡೆಯಿತು.

ಈ ಸಂದರ್ಭದಲ್ಲಿ ಪಡ್ಡ್ಯಾರಬೆಟ್ಟ ಅನುವಂಶೀಯ ಆಡಳಿತದಾರರು ಎ. ಜೀವಂಧರ ಕುಮಾರ್ ಯಾನೆ ಕಂಚಿ ಪೂವಣಿಯವರು ಪಡ್ಡ್ಯೋಡಿಗುತ್ತು, ವಿಕಾಸ್ ಜೈನ್, ವಿಶ್ವಾಸ್ ಜೈನ್, ಮತ್ತು ಮನೆಯವರು, ಊರ ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.

ಚಿತ್ರ ; ಕಿಶು ಪೆರಿಂಜೆ

Related posts

ತೆಂಕಕಾರಂದೂರು: ಶ್ರೀರಾಗ ಸಂಗೀತ ಶಾಲೆ ಶುಭಾರಂಭ

Suddi Udaya

ಉಜಿರೆ ರತ್ನಮಾನಸದಲ್ಲಿ “ಆಟಿದ ಅಟಿಲ್ ” ಕಾರ್ಯಕ್ರಮ

Suddi Udaya

ಕಳಿಯ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

Suddi Udaya

ಸರಕಾರಿ ಸೌಲಭ್ಯ ವಂಚಿತ ಕೊಕ್ಕಡ ಮಹಾವೀರ ಕಾಲನಿ: ಗ್ರಾ.ಪಂ ಉಪಾಧ್ಯಕ್ಷ ಪ್ರಭಾಕರ ಗೌಡರಿಂದ ಸಚಿವರಿಗೆ ಮನವಿ

Suddi Udaya

ಟೇಬಲ್ ಟೆನ್ನಿಸ್ ಪಂದ್ಯಾಟ: ಉಜಿರೆ ಎಸ್ ಡಿ ಎಂ ನ್ಯಾಚುರೋಪಥಿ ಚಾಂಪಿಯನ್

Suddi Udaya

ಎಸ್.ಡಿ.ಎಂ ಕಾಲೇಜು : ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

Suddi Udaya
error: Content is protected !!