ಗರ್ಡಾಡಿ: ಮುಗೇರಡ್ಕ ಶ್ರೀ ಕೊಡಮಣಿತ್ತಾಯ, ಪಡ್ತ್ರಾವಂಡಿ ಕ್ಷೇತ್ರ ಬದಿನಡೆಯಲ್ಲಿ ಪ್ರತಿಷ್ಠಾ ಮಹೋತ್ಸವ ಮತ್ತು ಸಿರಿ ಸಿಂಗಾರದ ನೇಮೋತ್ಸವವು ಮಾರ್ಚ್ 16 ಮತ್ತು17ರಂದು ಜರಗಲಿರುವುದು.
ಇಂದು (ಮಾ.16ರಂದು) ಸಂಜೆ ಶಿಲ್ಪಿಗಳಿಗೆ ಸಂಭಾವನೆ, ದೈವಾಲಯ ಪರಿಗ್ರಹ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹವಾಚನ, ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನಹೋಮ ಸಹಿತ, ವಾಸ್ತು ಹೋಮ ವಾಸ್ತು ಪೂಜೆ ಬಲಿ, ಪೀಠಶುದ್ಧಿ ಅಧಿವಾಸ, ರಾತ್ರಿ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.
ಮಾರ್ಚ್ 17ರಂದು ಪ್ರಾತಃಕಾಲ ಗಣಯಾಗ, ಬೆಳಿಗ್ಗೆ ಸಾನಿಧ್ಯ ಪ್ರತಿಷ್ಠೆ ಮತ್ತು ಸಾನಿಧ್ಯ ಕಲಶಾಭಿಷೇಕ ಮಹಮ್ಮಾಯಿ ಪೀಠ ಪ್ರತಿಷ್ಠೆ, ಗರ್ಡಾಡಿ ಗುತ್ತು ಮತ್ತು ಕುಬಳಬೆಟ್ಟು ಗುತ್ತಿನಿಂದ ಮತ್ತು ದೈವಗಳ ಭಂಡಾರ ಇಳಿಯುವುದು, ಮುಗೇರಡ್ಕ ಬದಿನಡೆ ಕ್ಷೇತ್ರದಲ್ಲಿ ದೈವಗಳ ಸಮಾಗಮ ಅಭಯವಾಕ್ಯ, ಪ್ರಧಾನ ಭಂಡಾರ ಪ್ರತಿಷ್ಠೆ, ಪಂಚವಿಂಶತಿ ಕಲಶಾಭಿಷೇಕ ಪರ್ವ ಸಂಕ್ರಾಂತಿ, ಶಾರಿ ಹಾಕುವುದು ಗೊನೆಮುಹೂರ್ತ, ಮುಹೂರ್ತ ಕಂಬ ಕೋಳಿಗುಂಟ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಎಣ್ಣೆಬೂಲ್ಯ, ಕೊಡಮಣಿತ್ತಾಯ ಪಡ್ತ್ರಾವಂಡಿ ದೈವಗಳ ಸಿರಿ ಸಿಂಗಾರದ ನೇಮೋತ್ಸವ, ರಾತ್ರಿ ದೈವಗಳ ಅಭಯವಾಕ್ಯದೊಂದಿಗೆ ಊರವರಿಗೆ ಗಂಧಬೂಳ್ಯ ವಿತರಣೆ ನಡೆಯಲಿರುವುದು.