ಉಜಿರೆ:ಉಜಿರೆಯ ಸುಂದರ ನಗರಿಯಲ್ಲಿ ಕಳೆದ ಎರಡು ವರ್ಷದ ಹಿಂದೆ ಪ್ರಾರಂಭಿಸಿದ ಶೀತಲ್ ಗಾರ್ಡನ್ ನಲ್ಲಿ ವಿಜಯ ಸಭಾಭವನದ ಉದ್ಘಾಟನೆಯು ಮಾ.17ರಂದು ನಡೆಯಿತು.
ನೂತನ ಸಭಾಭವನದ ಉದ್ಘಾಟನೆಯನ್ನು ಉಜಿರೆ ಭಾರತ್ ಆಯರ್ನ್ ವರ್ಕ್ಸ್ ನ ಮಾಲಕರಾದ ಬಿ.ಪಾಂಡುರಂಗ ಬಾಳಿಗ ನೆರವೇರಿಸಿ ಸುಂದರವಾದ ಸಭಾಭವನ ಉಜಿರೆಯಲ್ಲಿ ನಿರ್ಮಿಸಿದ್ದು ಸಂತೋಷ ತಂದಿದೆ.ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ ವಹಿಸಿ ಮಾತನಾಡಿ ಉದ್ಯಮದೊಂದಿಗೆ ನೂರಾರು ಜನರಿಗೆ ಆಶ್ರಯದಾತರಾದ ಗೋಪಾಲ ಸಿ ಬಂಗೇರ ಸಮಾಜಕ್ಕೆ ಮಾದರಿ ಎಂದರು.ವೇದಿಕೆಯಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್,ಸದಸ್ಯರಾದ ಕೆ.ಬಾಲಕೃಷ್ಣ ಗೌಡ,ಚಾರ್ಟರ್ಡ್ ಅಕೌಂಟೆಂಟ್ ಕೆ.ಸುರೇಂದ್ರ ನಾಯಕ್,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಪ್ರಭಂಧಕರಾದ ಪದ್ಮನಾಭ ನಾಯಕ್,ಬೆಳ್ತಂಗಡಿಯ ಪ್ರಸಿದ್ಧ ವ್ಯದ್ಯರಾದ ಡಾ.ಜಗನ್ನಾಥ್,ನಿವೃತ್ತ ಶಿಕ್ಷಕರಾದ ಸಂಜೀವ ಪೂಜಾರಿ ಕೊಕ್ಕರ್ಣೆ,ನಿವೃತ್ತ ಪುಡ್ ಇನ್ಸ್ಪೆಕ್ಟರ್ ಎಂ.ಎಸ್ ಬಂಗೇರ ಉಪಸ್ಥಿತರಿದ್ದರು.
ಆಯಾಂಶ್ ಪ್ರಾರ್ಥನೆ ಹಾಡಿದರು. ಶೀತಲ್ ಗಾರ್ಡನ್ ಮಾಲೀಕರಾದ ಗೋಪಾಲ್ ಸಿ ಬಂಗೇರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.ಸುನೀಲ್ ಕಾಶಿಬೆಟ್ಟು ನಿರೂಪಿಸಿದರು.ಶ್ರೀಮತಿ ವಿಜಯ ಗೋಪಾಲ ಬಂಗೇರ ನಂದಗೋಗುಲ ಪಂದುಬೆಟ್ಟು ವಂದಿಸಿದರು.ಶ್ರೀಮತಿ ಶೀತಲ್ ಮತ್ತು ಸಾಹಿಲ್ ವೈ ಕುಮಾರ್ ಜಯಶ್ರೀ ಬೆಳ್ತಂಗಡಿ, ಡಾ. ಸುಶ್ಮಿತಾ ಮತ್ತು ಅಶ್ವತ್ ರಾಜ್ ಅನುಗ್ರಹ ಆದಿ ಉಡುಪಿ,ಯುವ ಉದ್ಯಮಿ ಪ್ರಶಾಂತ್ ಕೊಕ್ಕರ್ಣೆ,ಸಂಜೀವ ಪೂಜಾರಿ ವೇಣೂರು ಹಾಗೂ ಗೋಪಾಲ ಬಂಗೇರರವರ ಬಂಧುಗಳು, ಶೀತಲ್ ಗಾರ್ಡನ್ ನ ಮ್ಯಾನೇಜರ್,ಸಿಬ್ಬಂದಿ ವರ್ಗದವರು ಸಹಕರಿಸಿದರು.