37.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಚಿನ್ನಾಭರಣ ಪರೀಕ್ಷಕರನ್ನು ವಜಾ ಮಾಡಿರುವ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಬೇಕೆಂದು ಅಗ್ರಹಿಸಿ ಕೊಕ್ಕಡ ಕೆನರಾ ಬ್ಯಾಂಕ್ ಮ್ಯಾನೇಜರ್ ಮೂಲಕ ಕೇಂದ್ರ ಕಚೇರಿಗೆ ಮನವಿ

ಕೊಕ್ಕಡದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಚಿನ್ನಾಭರಣ ಪರೀಕ್ಷಕರನ್ನು ವಜಾ ಮಾಡಿರುವ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಬೇಕೆಂದು ಹಾಗೂ ಪದ್ಮನಾಭ ಆಚಾರ್ಯರನ್ನು ಚಿನ್ನ ಪರಿಶೋಧಕನಾಗಿ ಮುಂದುವರಿಸುವಂತೆ ಅಗ್ರಹಿಸಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಾ.18ರಂದು ಕೊಕ್ಕಡ ಕೆನರಾ ಬ್ಯಾಂಕ್ ನ ಮ್ಯಾನೇಜರ್ ಅಂಕಿತ್ ಸಿಂಗ್ ಮೂಲಕ ಮಂಗಳೂರು ಮುಖ್ಯ ಕಚೇರಿ ಜನರಲ್ ಮ್ಯಾನೇಜರ್ ಗೆ ಮನವಿ ಸಲ್ಲಿಸಲಾಯಿತು.

ಕೊಕ್ಕಡ ಗ್ರಾಮದ ಕೊಕ್ಕಡ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳೆದ19 ವರ್ಷಗಳಿಂದ ಪದ್ಮನಾಭ ಆಚಾರ್ಯರವರು ಚಿನ್ನ ಪರಿಶೋಧಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ದುರುದ್ದೇಶದಿಂದ ಇವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ ಟರ್ಮಿನೇಶನ್ ಪತ್ರದಲ್ಲಿ ನಕಲಿ ಚಿನ್ನ [SPURIOUS GOLD] ವನ್ನು ಬ್ಯಾಂಕಿನಲ್ಲಿ ಅಡಮಾನವಿಡಲು ಕಾರಣರಾಗಿದ್ದೀರಿ ಎಂಬ ಕಾರಣವನ್ನು ನೀಡಲಾಗಿದೆ. ಆದರೆ ಬ್ಯಾಂಕಿನ ಗೋಡೆಯಲ್ಲಿ ಅಂಟಿಸಲಾದ ಬರಹಗಳ ಪ್ರಕಾರ ವ್ಯವಸ್ಥಾಪಕರಿದ್ದು ನಿಯಮಗಳ ಪ್ರಕಾರ ಚಿನ್ನ ಪರಿಶೋಧಿಸಬೇಕು ಎಂಬ ಬರಹವನ್ನು ಬರೆಯಲಾಗಿದೆ ಮತ್ತು ಆಚಾರ್ಯರಿಗೆ ಇದುವರೆಗೆ ಚಿನ್ನವನ್ನು ವಿರೂಪಗೊಳಿಸಿ ಅಥವಾ ತುಂಡರಿಸಿ ಪರಿಶೀಲನೆ ನಡೆಸಬಹುದು ಎಂದು ನಿಯಮಗಳ ಮಾರ್ಗಸೂಚಿ ಪಟ್ಟಿಗಳನ್ನು ಕೊಟ್ಟಿರುವುದಿಲ್ಲ. ಸಾರ್ವಜನಿಕರಾದ ನಾವು ಈ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮತ್ತು ಪದ್ಮನಾಭ ಆಚಾರ್ಯರನ್ನು ಸೇವೆಯಲ್ಲಿ ಮಂದುವರಿಸಬೇಕೆಂದು ಬ್ಯಾಂಕಿನ ಕೇಂದ್ರ ಕಛೇರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಬಿ.ಎಮ್ ಭಟ್, ಸುಬ್ರಹಣ್ಯ ಶಬರಾಯ, ಪದ್ಮನಾಭ ಆಚಾರ್ಯ, ಶ್ರೀಧರ ಕೆಂಗುಡೇಲು, ದಯಾನೀಶ್, ತುಕ್ರಪ್ಪ ಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.

Related posts

ಉಜಿರೆ ಶ್ರೀ ಧ.ಮಂ. ಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕರಿಂದ ಗದ್ದೆ ನಾಟಿ ಕಾರ್ಯಕ್ರಮ

Suddi Udaya

ಬೆದ್ರಬೆಟ್ಟು ಶ್ರೀ ಕ್ಷೇತ್ರ ಮಹಮ್ಮಾಯಿ ಮಾರಿಗುಡಿ ಜೀರ್ಣೋದ್ಧಾರದ “ವಿಜ್ಞಾಪನಾ ಪತ್ರ” ಬಿಡುಗಡೆ

Suddi Udaya

ದಂತ ವೈದ್ಯಕೀಯ ಪರೀಕ್ಷೆ : ಗೇರುಕಟ್ಟೆಯ ಡಾ|ಅನುದೀಕ್ಷಾರಿಂದ ಅತ್ಯುತ್ತಮ ಸಾಧನೆ

Suddi Udaya

ನಿಡ್ಲೆ ಬಸ್ಟ್ ಸ್ಟಾಂಡ್ ಬಳಿ ಸಂಪೂರ್ಣ ಹದಗೆಟ್ಟ ರಸ್ತೆ: ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಒತ್ತಾಯ

Suddi Udaya

ಜ. 25: ಅರಸಿನಮಕ್ಕಿಯಲ್ಲಿ ಹಿಂದೂ ಸಂಗಮ : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕೊಕ್ಕಡ : ಶ್ರೀ ರಾಮ‌ ಸೇವಾ ಮಂದಿರಕ್ಕೆ ಅಡುಗೆ ಪಾತ್ರೆ, ಸಾಮಾಗ್ರಿಗಳ ಕೊಡುಗೆ

Suddi Udaya
error: Content is protected !!