ಕಳೆಂಜ ಗ್ರಾಮದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಲೆತ್ತಡ್ಕ ದಲ್ಲಿ ಜೆ ಸಿ ಐ ಕೊಕ್ಕಡ ಕಪಿಲ ಘಟಕದ ವತಿಯಿಂದ ಮಹಿಳೆ ಮತ್ತು ಶಿಕ್ಷಣ ಎಂಬ ವಿಚಾರವಾಗಿ ಕಾರ್ಯಾಗಾರ ಮಾ.17 ರಂದು ನಡೆಯಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಶಿಕ್ಷಣ ಇಲಾಖೆಯ ಸಂಯೋಜಕಿ ಚೇತನಾಕ್ಷಿ ಎಂ ಭಾಗವಹಿಸಿ ನಡೆಸಿಕೊಟ್ಟರು.
ವೇದಿಕೆಯಲ್ಲಿ ಕೊಕ್ಕಡ ಕಪಿಲ ಘಟಕದ ಅಧ್ಯಕ್ಷರಾದ ಜೆ ಸಿ ಹೆಚ್ ಜಿ ಎಫ್ ಸಂತೋಷ್ ಜೈನ್, ಕಾರ್ಯದರ್ಶಿ ಜೆಸಿ ಅಕ್ಷತ್ ರೈ ನಿಕಟಪೂರ್ವ ಅಧ್ಯಕ್ಷ ಜೆ ಸಿ ಸೆನೆಟರ್ ಜಿತೇಶ್ ಎಲ್ ಪಿರೇರಾ, ಲೇಡಿ ಅಧ್ಯಕ್ಷ ಜೆ ಸಿ ಶೋಭಾ ಪಿ, ಯೋಜನಾ ನಿರ್ದೇಶಕಿ ಜೆಸಿ ಚಂದನಾ ಜೈನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜೆ ಸಿ ಹೆಚ್ ಜೋಸೆಫ್ ಫಿರೇರ, ಪೂರ್ವ ಅಧ್ಯಕ್ಷರಾದ ಜೆ ಸಿ ಜೆ ಎಫ್ ಎಂ ಶ್ರೀಧರ್ ರಾವ್, ಉಪಾಧ್ಯಕ್ಷರಾದ ಜೆಸಿ ಜಸ್ವಂತ್ ಫಿರೇರ, ಕೋಶಾಧಿಕಾರಿ ಜೆ ಸಿ ವಿದ್ಯೆಂದ್ರ ಗೌಡ, ಜೂನಿಯರ್ ಜೆಸಿ ಆಯುಸ್ ಜೈನ್, ಹಾಗೂ ಸ್ಥಳಿಯ ಸಂಘಗಳ ಮಹಿಳೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಜೆಸಿ ವಾಣಿ ಚಂದನಾ ಜೈನ್ ವಾಚಿಸಿದರು. ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ಜೂನಿಯರ್ ಜೆಸಿ ಆಯುಷ್ ಜೈನ್ ಓದಿದರು, ಸಂತೋಷ್ ಜೈನ್ ಸ್ವಾಗತಿಸಿ, ಅಕ್ಷತ್ ರೈ ಕಾರ್ಯಕ್ರಮವನ್ನು ವಂದಿಸಿದರು.