39.2 C
ಪುತ್ತೂರು, ಬೆಳ್ತಂಗಡಿ
March 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮದಲ್ಲಿ ಸಮಾಜ ಸೇವಕ ಯಶೋಧರ ಶೆಟ್ಟಿ ಬಳಂಜರವರಿಗೆ ಸನ್ಮಾನ

ಬೆಳ್ತಂಗಡಿ: ಜೆಸಿಐ ಭಾರತದ ವಲಯ 15 ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮವಾದ
“ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ನ ವಿಭಾಗದಲ್ಲಿ ಜನ ಸೇವೆಯೇ ಜನಾರ್ಧನ ಸೇವೆ ಎಂಬುದನ್ನು ಅರಿತು ಜನರ ಕಷ್ಟಗಳಿಗೆ, ಊರಿನ‌ ಬೆಳವಣಿಗೆಗೆ ಸದಾ ಸ್ಪಂದಿಸುತ್ತ, ಊರಿನ ಜನರ ಅಪಾರ ಪ್ರೀತಿಗೆ ಪಾತ್ರರಾಗಿರುವ ಸರ್ವೋದಯ ಪ್ರೆಂಡ್ಸ್ ಅಟ್ಲಾಜೆಯ ಮಾಜಿ ಅಧ್ಯಕ್ಷರು, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಪ್ರಸ್ತುತ ಗ್ರಾಮ ಪಂಚಾಯತ್ ಬಳಂಜದ ಉಪಾಧ್ಯಕ್ಷರಾಗಿರುವ ಯಶೋಧರ ಶೆಟ್ಟಿಯವರನ್ನು ಜೆಸಿಐ ಭವನದಲ್ಲಿ ಗೌರವಿಸಲಾಯಿತು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಉಪಾಧ್ಯಕ್ಷರಾಗಿರುವ ಪ್ರೀತಮ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು.

ವೇದಿಕೆಯಲ್ಲಿ ಬೆಳ್ತಂಗಡಿ ಮಾತೃಶ್ರೀ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ ನ ಮಾಲಕ ಮೋಹನ್ ಸುವರ್ಣ, ವಲಯ 15 ರ ಉಪಾಧ್ಯಕ್ಷ ಶಂಕರ್ ರಾವ್ ಅತಿಥಿಯಾಗಿ ಭಾಗವಹಿಸಿದರು.

ವೇದಿಕೆಯಲ್ಲಿ ಜೆಸಿಐ ಬೆಳ್ತಂಗಡಿ ಘಟಕದ ಅಧ್ಯಕ್ಷ ರಂಜಿತ್ ಎಚ್ ಡಿ ಬಳಂಜ, ಮಹಿಳಾ ಘಟಕದ ಸಂಯೋಜಕಿ ಶೃತಿ ರಂಜಿತ್, ಜೆಜೆಸಿ ಅಧ್ಯಕ್ಷ ಸಮನ್ವತ್ ಕುಮಾರ್ ಉಪಸ್ಥಿತರಿದ್ದರು.

ಸನ್ಮಾನ ಪತ್ರವನ್ನು ಕಾರ್ಯಕ್ರಮದ ಸಂಯೋಜಕಿ ರಕ್ಷಿತಾ ಶೆಟ್ಟಿ ವಾಚಿಸಿದರು. ಕಾರ್ಯದರ್ಶಿ ಅನುದೀಪ್ ಜೈನ್ ಧನ್ಯವಾದ ಸಲ್ಲಿಸಿದರು.
ವೇದಿಕೆ ಆಹ್ವಾನವನ್ನು ಪೂರ್ವ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ ಮಾಡಿದರು. ಜೆಸಿ ವಾಣಿಯನ್ನು ಶಿವಾನಿ ಉದ್ಘೋಷಿಸಿದರು.

ಕಾರ್ಯಕ್ರಮದಲ್ಲಿ ಘಟಕದ ಪೂರ್ವಧ್ಯಕ್ಷರುಗಳಾದ ತುಕಾರಾಮ್, ನಾರಾಯಣ ಶೆಟ್ಟಿ, ಚಿದಾನಂದ ಇಡ್ಯ, ಸಂತೋಷ್ ಪಿ ಕೋಟ್ಯಾನ್, ಪ್ರಸಾದ್ ಬಿ ಎಸ್, ಉಪಾಧ್ಯಕ್ಷರಾದ ಶೈಲೇಶ್, ಸದಸ್ಯರಾದ ಜಿತೇಶ್, ರತ್ನಾಕರ ಹಾಗೂ ಜೆಜೆಸಿ ಸದಸ್ಯರು ಭಾಗವಹಿಸಿದರು.

Related posts

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಭಾರತೀಯ ವೈಜ್ಞಾನಿಕ ಪರಂಪರೆ’ ರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಗೇರುಕಟ್ಟೆ: ಕೃಷಿಕ ಪೆರಾಜೆ ಬಳ್ಳಿದಡ್ಡ ಕಾಂ ತಪ್ಪ ಗೌಡ ನಿಧನ

Suddi Udaya

ಉಚಿತ ಬಿದಿರು ಸಸಿಗಳ ವಿತರಣೆ; ಅರ್ಜಿ ಆಹ್ವಾನ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಚ್ಛತಾ ಆಂದೋಲನ ಶಿಬಿರ

Suddi Udaya

ಧಮ೯ಸ್ಥಳ ಶರಾವತಿ ವಸತಿ ಗೃಹದ ಎದುರು ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿ: ಆಸ್ಪತ್ರೆಗೆ ಸಾಗಿಸುವ ಹಂತದಲ್ಲಿ ಮೃತ್ಯು

Suddi Udaya

ಉಜಿರೆ ಆದಿನಾಗ ಬ್ರಹ್ಮ ಮೊಗೇರ್ಕಳ ದೇವಸ್ಥಾನದಿಂದ ಕಾರ್ಯಕರ್ತರಿಗೆ ಅಭಿನಂದನೆ

Suddi Udaya
error: Content is protected !!