April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಮಾಜ ಸೇವೆ ಮುಖೇನಾ ಗುರುತಿಸಿಕೊಂಡಿರುವ ಉಜಿರೆ ಬದುಕು ಕಟ್ಟೋಣ ಸೇವಾ ಟ್ರಸ್ಟ್ ಸಂಚಾಲಕ,ಉದ್ಯಮಿ ಮೋಹನ್ ಕುಮಾರ್ ಗೆ ಪ್ರತಿಷ್ಠಿತ ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ-2024 ಪ್ರದಾನ

ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್(ರಿ) ನ ಸಂಚಾಲಕ,ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ‘ಕನಸಿನ ಮನೆ’ ಮಾಲೀಕರಾದ ಮೋಹನ್ ಕುಮಾರ್ ಅವರಿಗೆ ಈ ವರ್ಷದ ಜಗತ್ ಪ್ರಸಿದ್ಧ ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ-2024 ಕ್ಕೆ ಭಾಜನರಾಗಿದ್ದಾರೆ.

ಮಾರ್ಚ್ 17ರ(ಇಂದು) ಭಾನುವಾರ ರಾತ್ರಿ 9 ಗಂಟೆಗೆ ಕ್ಕೆ ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ ಶ್ರೀಗಳಾದ ಡಾ.ಪರಮಪೂಜ್ಯ ಶ್ರೀಮತ್ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋಹನ್ ಕುಮಾರ್ ಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕಳೆದ ಹಲವಾರು ಸಮಯಗಳಿಂದ ಸಮಾಜ ಸೇವೆ ಹಾಗೂ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಗಾಗಲೇ 5 ಶಾಲೆಗಳನ್ನು ದತ್ತು ಸ್ವೀಕಾರ ಮಾಡಿ ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತಿರುವ ಮೋಹನ್ ಕುಮಾರ್ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಧಾನ‌ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ಜನಾರ್ಧನ್ ,ಉಜಿರೆ ಸಂಧ್ಯಾ ಟ್ರೆಡರ್ಸ್ ಮಾಲೀಕ ರಾಜೇಶ್ ಪೈ , ಕನ್ನಡ ಚಲನಚಿತ್ರ ನಟ ರಮೇಶ್ ಅರವಿಂದ್,ಉದ್ಯಮಿ ರವಿ ಚಕ್ಕಿತ್ತಾಯ ಭಾಗಿಯಾಗಿದ್ದರು.

Related posts

ಮಡಂತ್ಯಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಪ್ರಮೋದ್ ಕುಮಾರ್

Suddi Udaya

ಅಳದಂಗಡಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ

Suddi Udaya

ಆರು ಜನ ನಕ್ಸಲರು ಶರಣಾಗತಿ ಬೆನ್ನಲ್ಲೇ ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಪತ್ತೆ

Suddi Udaya

ದುಬೈಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಕಾಶಿಪಟ್ಣ ದಾರುನ್ನೂರ್ ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ತ್ವಾಕಾ ಅಹ್ಮದ್ ಮುಸ್ಲಿಯಾರ್ ರಿಗೆ ಸನ್ಮಾನ

Suddi Udaya

ಮೇಲಂತಬೆಟ್ಟು: ಪಕ್ಕಿದಕಲದಲ್ಲಿ ರಸ್ತೆಗೆ ಬಿದ್ದ ಮರ: ಸ್ಥಳೀಯರಿಂದ ತೆರವು ಕಾರ್ಯ

Suddi Udaya

ಚಾರ್ಮಾಡಿ ಘಾಟ್ ವಿಸ್ತರಣೆಗೆ ರೂ. 343.73 ಕೋಟಿ ಬಿಡುಗಡೆ- ನಿತಿನ್ ಗಡ್ಕರಿ

Suddi Udaya
error: Content is protected !!