38.6 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಹತೋಟಿಗೆ ಬಂದ ಬೆಂಕಿ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ವನ್ಯಜೀವಿ ವಿಭಾಗದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ, ಹತೋಟಿಗೆ ಬಂದಿದ್ದು ಕಾಡ್ಗಿಚ್ಚಿನ ಭಯ ದೂರವಾಗಿದೆ.
ಮಾ.16 ಶನಿವಾರ ಸಂಜೆಯ ಹೊತ್ತಿಗೆ ಕುದುರೆಮುಖ ಪೀಕ್ ಕಡೆಯಿಂದ ಆವರಿಸಿದ ಬೆಂಕಿ ನಾವೂರು ಗ್ರಾಮದ ತೊಳಲಿಯ ಏಳುಸುತ್ತು ವರೆಗೆ ವ್ಯಾಪಿಸಿತ್ತು.


ಭಾನುವಾರ ಬೆಳಿಗ್ಗೆ ಬೆಳ್ತಂಗಡಿ ಮತ್ತು ಕುದುರೆಮುಖ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರುವ ಕಾರ್ಯಾಚರಣೆ ಆರಂಭಿಸಿದ್ದು ಸೋಮವಾರ ಸಂಜೆಯ ಹೊತ್ತಿಗೆ ಬೆಂಕಿ ಹತೋಟಿಗೆ ಬಂದಿದೆ. ಕುದುರೆಮುಖ ಕಡೆಯಿಂದ ಒಣಹುಲ್ಲಿಗೆ ಆವರಿಸಿದ ಬೆಂಕಿ ನಾವೂರು ತನಕವು ಬಂದಿದೆ. ಸುಮಾರು ಎರಡಾಳು ಎತ್ತರದ ಒಣಹುಲ್ಲಿಗೆ ಹಿಡಿಯುತ್ತಾ ಬಂದ ಬೆಂಕಿಯ ಕೆನ್ನಾಲಿಗೆ 10 ಕಿ.ಮೀ.ದೂರದವರೆಗೂ ಗೋಚರಿಸುತ್ತಿತ್ತು.
ಒಣ ಹುಲ್ಲಿಗೆ ಬೆಂಕಿ ಹಿಡಿದರೆ ವೇಗವಾಗಿ ಹರಡುತ್ತದೆ ಹಾಗೂ ಹೆಚ್ಚಾಗಿ ಹುಲ್ಲು ಇರುವ ಪ್ರದೇಶವನ್ನು ಮಾತ್ರ ಸುಡುತ್ತಾ ಮುಂದುವರಿಯುತ್ತದೆ. ಮಂದವಾಗಿ ಬೀಸುತ್ತಿದ್ದ ಗಾಳಿಯು ಬೆಂಕಿ ಹೆಚ್ಚು ಪ್ರಸರಿಸಲು ಕಾರಣವಾಗಿತ್ತು.
ಅರಣ್ಯ ಪ್ರವೇಶಿಸಿಲ್ಲ:
ಕೇವಲ ಒಣಹುಲ್ಲನ್ನು ಸುಟ್ಟ ಬೆಂಕಿ ಸಕಾಲಿಕ ಕಾರ್ಯಾಚರಣೆಯಿಂದ ಅರಣ್ಯವನ್ನು ಪ್ರವೇಶಿಸಿಲ್ಲ ಹಾಗೂ ಅರಣ್ಯ ಸಂಪತ್ತಿಗೆ ಯಾವುದೇ ರೀತಿ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ. ಭಾನುವಾರ ಸಂಜೆ ಕುದುರೆಮುಖ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಮ ಬಾಬು ನಾವೂರು ಪ್ರದೇಶಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು.

Related posts

ಬೆಳ್ತಂಗಡಿ: ಬಂಟರ ಮಹಿಳಾ ವಿಭಾಗದ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ಹೇರಾಜೆ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ವಾರ್ಷಿಕೋತ್ಸವದಲ್ಲಿ ಪದ್ಮರಾಜ್ ಆರ್. ಪೂಜಾರಿ ಭಾಗಿ

Suddi Udaya

ಗುರುವಾಯನಕೆರೆಯಿಂದ ಧರ್ಮಸ್ಥಳ ಕನ್ಯಾಡಿ ತನಕ ಬಸ್ಸು ನಿಲ್ದಾಣಗಳ ಸ್ವಚ್ಛತಾ ಕಾರ್ಯ

Suddi Udaya

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಪಾರ ಮೇಳ

Suddi Udaya

ಮೂಡುಕೋಡಿ ಮತದಾನ ಕೇಂದ್ರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನಲ್ಲಿ 3 ದಿನ ನಡೆಯಲಿರುವ ಮೀನು ಮೇಳಕ್ಕೆ ಚಾಲನೆ: ವಿಶೇಷ ಆಕರ್ಷಣೆ ಮೀನಿಗೆ ಗಾಳ ಹಾಕುವ ಸ್ಪರ್ಧೆ

Suddi Udaya
error: Content is protected !!