ನೇತ್ರಾವತಿ ನದಿಯಲ್ಲಿ ಬಿದ್ದು ಮಂಜೊಟ್ಟಿಯ ಯುವಕ ಮೃತ್ಯು

Suddi Udaya

Updated on:

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಬಿದ್ದು ಮಂಜೊಟ್ಟಿಯ ಯುವಕ ಸಾವನ್ನಪ್ಪಿದ ಘಟನೆ ಮಾ.18 ರಂದು ಸಂಜೆ ಶಂಭೂರಿನ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಲ್ಲಿ ನಡೆದಿದೆ.

ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಕ್ಷ (28) ಮೃತ ಯುವಕ.

ಸ್ನೇಹಿತರಾದ ವಿನ್ಸೆಂಟ್, ಮ್ಯಾಕ್ಸಿಂ, ಪ್ರಮೋದ್, ದಯಾನಂದ ಅವರ ಜೊತೆ ಕಾರಿನಲ್ಲಿ ಶಂಭೂರಿಗೆ ಹೋಗಿದ್ದು ಸ್ನೇಹಿತರು ಸ್ನಾನಕ್ಕೆಂದು ನದಿಗೆ ಇಳಿದಿದ್ದರೂ ಲೋಹಿತಾಕ್ಷ ನದಿ ದಡದಲ್ಲಿ ಕುಳಿತಿದ್ದರು. ಅದರೆ ಸ್ನೇಹಿತರು ಸ್ನಾನ ಮಾಡಿ ಹಿಂದಿರುಗಿದ ವೇಳೆ ಅವರು ನೀರಿನಲ್ಲಿ ಬಿದ್ದಿದ್ದರು. ಅವರ ತಲೆ ಹಿಂಭಾಗದಲ್ಲಿ ಗಾಯಗಳಾಗಿದ್ದು ದಡದಲ್ಲಿ ಕುಳಿತಿದ್ದ ಅವರ ಆರೋಗ್ಯದಲ್ಲಿ ಏನೋ ತೊಂದರೆ ಉಂಟಾಗಿ ತಲೆ ತಿರುಗಿ ಬಿದ್ದಿರಬಹುದೇ ಅಥವಾ ನದಿಯಲ್ಲಿ ನಡೆದುಕೊಂಡು ಬರುವಾಗ ಕಲ್ಲು ಜಾರಿ ಬಿದ್ದಿರಬಹುದೇ ಎಂದು ಶಂಕಿಸಲಾಗಿದೆ.

ಒಂದು ವೇಳೆ ಸ್ನಾನಕ್ಕಿಳಿಯುತಿದ್ದಲ್ಲಿ ಅವರ ಕೈಯಲ್ಲಿ ವಾಚ್ ಹಾಗೂ ಧರಿಸಿದ ಬಟ್ಟೆ ಹಾಗೆ ಇತ್ತೆನ್ನಲಾಗಿದೆ. ಲೋಹಿತಾಕ್ಷ ಅವರು ಎಲೆಕ್ಟಿಕಲ್ ಗುತ್ತಿಗೆ ಕೆಲಸಕ್ಕೆ ಹೋಗುತ್ತಿದ್ದರು. ಸೋಮವಾರ ಕೆಲಸಕ್ಕೆ ರಜೆ ಇದ್ದ ಕಾರಣ ಶಂಭೂರಿನಲ್ಲಿ ಗೆಳೆಯನೊಬ್ಬನ ಸಂಬಂಧಿಕರ ಮನೆ ಇದ್ದು ಅಲ್ಲಿಗೆ ತೆರಳಿ ನಂತರ ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಲೋಹಿತಾಕ್ಷ ಮನೆಯ ಅಧಾರ ಸ್ತಂಭವಾಗಿದ್ದು ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ನಡದಲ್ಲಿ ತಾಯಿ ಮತ್ತು ಪತ್ನಿ ಜತೆ ವಾಸಿಸುತಿದ್ದರು. ಕಳೆದ ಕೆಲವು ಸಮಯಗಳ ಹಿಂದೆ ಮಂಜೊಟ್ಟಿಯಲ್ಲಿ ನಡೆದ ಬಸ್‌ ಅಪಘಾತದಲ್ಲಿ ಇವರ ಮಾವನ ಮಗ ಮೃತಪಟ್ಟಿದ್ದರು.ವಿವಿಧ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಅವರು ಎಲ್ಲರೊಂದಿಗೆ ಆತ್ಮೀಯತೆಯಿಂದ ಇರುತಿದ್ದರು.

Leave a Comment

error: Content is protected !!