September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನೇತ್ರಾವತಿ ನದಿಯಲ್ಲಿ ಬಿದ್ದು ಮಂಜೊಟ್ಟಿಯ ಯುವಕ ಮೃತ್ಯು

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಬಿದ್ದು ಮಂಜೊಟ್ಟಿಯ ಯುವಕ ಸಾವನ್ನಪ್ಪಿದ ಘಟನೆ ಮಾ.18 ರಂದು ಸಂಜೆ ಶಂಭೂರಿನ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಲ್ಲಿ ನಡೆದಿದೆ.

ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಕ್ಷ (28) ಮೃತ ಯುವಕ.

ಸ್ನೇಹಿತರಾದ ವಿನ್ಸೆಂಟ್, ಮ್ಯಾಕ್ಸಿಂ, ಪ್ರಮೋದ್, ದಯಾನಂದ ಅವರ ಜೊತೆ ಕಾರಿನಲ್ಲಿ ಶಂಭೂರಿಗೆ ಹೋಗಿದ್ದು ಸ್ನೇಹಿತರು ಸ್ನಾನಕ್ಕೆಂದು ನದಿಗೆ ಇಳಿದಿದ್ದರೂ ಲೋಹಿತಾಕ್ಷ ನದಿ ದಡದಲ್ಲಿ ಕುಳಿತಿದ್ದರು. ಅದರೆ ಸ್ನೇಹಿತರು ಸ್ನಾನ ಮಾಡಿ ಹಿಂದಿರುಗಿದ ವೇಳೆ ಅವರು ನೀರಿನಲ್ಲಿ ಬಿದ್ದಿದ್ದರು. ಅವರ ತಲೆ ಹಿಂಭಾಗದಲ್ಲಿ ಗಾಯಗಳಾಗಿದ್ದು ದಡದಲ್ಲಿ ಕುಳಿತಿದ್ದ ಅವರ ಆರೋಗ್ಯದಲ್ಲಿ ಏನೋ ತೊಂದರೆ ಉಂಟಾಗಿ ತಲೆ ತಿರುಗಿ ಬಿದ್ದಿರಬಹುದೇ ಅಥವಾ ನದಿಯಲ್ಲಿ ನಡೆದುಕೊಂಡು ಬರುವಾಗ ಕಲ್ಲು ಜಾರಿ ಬಿದ್ದಿರಬಹುದೇ ಎಂದು ಶಂಕಿಸಲಾಗಿದೆ.

ಒಂದು ವೇಳೆ ಸ್ನಾನಕ್ಕಿಳಿಯುತಿದ್ದಲ್ಲಿ ಅವರ ಕೈಯಲ್ಲಿ ವಾಚ್ ಹಾಗೂ ಧರಿಸಿದ ಬಟ್ಟೆ ಹಾಗೆ ಇತ್ತೆನ್ನಲಾಗಿದೆ. ಲೋಹಿತಾಕ್ಷ ಅವರು ಎಲೆಕ್ಟಿಕಲ್ ಗುತ್ತಿಗೆ ಕೆಲಸಕ್ಕೆ ಹೋಗುತ್ತಿದ್ದರು. ಸೋಮವಾರ ಕೆಲಸಕ್ಕೆ ರಜೆ ಇದ್ದ ಕಾರಣ ಶಂಭೂರಿನಲ್ಲಿ ಗೆಳೆಯನೊಬ್ಬನ ಸಂಬಂಧಿಕರ ಮನೆ ಇದ್ದು ಅಲ್ಲಿಗೆ ತೆರಳಿ ನಂತರ ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಲೋಹಿತಾಕ್ಷ ಮನೆಯ ಅಧಾರ ಸ್ತಂಭವಾಗಿದ್ದು ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ನಡದಲ್ಲಿ ತಾಯಿ ಮತ್ತು ಪತ್ನಿ ಜತೆ ವಾಸಿಸುತಿದ್ದರು. ಕಳೆದ ಕೆಲವು ಸಮಯಗಳ ಹಿಂದೆ ಮಂಜೊಟ್ಟಿಯಲ್ಲಿ ನಡೆದ ಬಸ್‌ ಅಪಘಾತದಲ್ಲಿ ಇವರ ಮಾವನ ಮಗ ಮೃತಪಟ್ಟಿದ್ದರು.ವಿವಿಧ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಅವರು ಎಲ್ಲರೊಂದಿಗೆ ಆತ್ಮೀಯತೆಯಿಂದ ಇರುತಿದ್ದರು.

Related posts

ಪುಂಜಾಲಕಟ್ಟೆ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಬೆನ್ನುಹುರಿ ಅಪಘಾತ  ಮಾಹಿತಿ ಕಾರ್ಯಾಗಾರ

Suddi Udaya

ಮುಂಡಾಜೆ: ವಿಶೇಷ ಚೇತನ ವಾರ್ಷಿಕ ದಿನಾಚರಣೆ ಅಂಗವಾಗಿ ಗ್ರಾಮೀಣ ಪುನರ್ವಸತಿ ಕಾರ್ಯ ವಿಭಾಗದ ವತಿಯಿಂದ ಸಮನ್ವಯ ಗ್ರಾಮ ಸಭೆ ಹಾಗೂ ವಿಕಲ ಚೇತನರಿಗೆ ಮಾಹಿತಿ ಕಾರ್ಯಾಗಾರ

Suddi Udaya

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ವಿಶ್ವ ಸೈಕಲ್ ದಿನ ಜಾಗೃತಿ ರ‍್ಯಾಲಿ

Suddi Udaya

ರಾಷ್ಟ್ರಮಟ್ಟದ ಇಂಡಿಯನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಫೇರ್ (INSEF): ಉಜಿರೆ ಎಸ್.ಡಿ.ಎಮ್ ಶಾಲೆ, (ರಾಜ್ಯ ಪಠ್ಯಕ್ರಮ)ಯ ವಿದ್ಯಾರ್ಥಿಗಳಾದ ಅಧಿಶ್ ಬಿ.ಸಿ ಮತ್ತು ಆಲಾಪ್ ಎಂ ವಿಜ್ಞಾನದ ಸಂಶೋಧನೆ ಮಂಡಣೆ – ಗೌರವಾನ್ವಿತ ಪುರಸ್ಕಾರ

Suddi Udaya

ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆ ಸಚಿವರಿಂದ ಸಭೆ: ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಸ್ತ್ರೀ ಸಂಘಟನೆ ಬೆಳ್ತಂಗಡಿ ಘಟಕ ವತಿಯಿಂದ ಪರಿಸರ ಸ್ವಚತಾ ಆಂದೋಲನ

Suddi Udaya
error: Content is protected !!