ಮಾ.23-27: ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ

Suddi Udaya

ಕಲ್ಮಂಜ: ತುಳುನಾಡಿನ ಸತ್ಯಸಾರದ “ಸತ್ಯದ ಸಿರಗಳ” ಮೂಲ ಆಲಡೆ ಪುಣ್ಯಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರಾ ಮಹೋತ್ಸವ ಶ್ರೀ ನಾಗದರ್ಶನ, ಆಶ್ಲೇಷಾ ಬಲಿ, ದೈವಗಳ ನೇಮೋತ್ಸವವು ಮಾ.23ರಿಂದ 27 ರ ತನಕ ವಿವಿಧ ಧಾರ್ಮಿಕ, ವೈದಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಪ್ರಧಾನ ಸಂಚಾಲಕ ಗುರುರಾಜ್ ಗುರಿಪಳ್ಳ ತಿಳಿಸಿದ್ದಾರೆ.


ಮಾ.23 ರಂದು ಬೆಳಿಗ್ಗೆ ವೈದಿಕ ವಿಧಿ ವಿಧಾನಗಳು. ಬೆಳಿಗ್ಗೆ 9 ಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ. ೧೧ಕ್ಕೆ ಧ್ವಜಾರೋಹಣ, ಮಹಾಪೂಜೆ, ಶ್ರೀ ದೇವರ ಬಲಿ. ಮಧ್ಯಾಹ್ನ ಪಲ್ಲಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ. ಸಂಜೆ 5.30ಕ್ಕೆ ಪಜಿರಡ್ಕ ಶ್ರೀ ಓಂಕಾರೇಶ್ವರ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ, ರಾತ್ರಿ 7.30ಕ್ಕೆ ದೇವರ ಉತ್ಸವ, ದೀಪಾರಾಧನೆ, ರಾತ್ರಿ 8.30ಕ್ಕೆ ಭೂತರಾಜ, ಮಹಿಷಂತಾಯ, ಮೂರ್ತಿಲ್ಲಾಯ ದೈವಗಳ ನೇಮೋತ್ಸವ ನಡೆಯಲಿದೆ.

ಮಾ.24ರಂದು ಗಣಹೋಮ, ಶತರುದ್ರಾಭಿಷೇಕ, ಶ್ರೀ ದೇವರ ಉತ್ಸವ, ನಾಗದೇವರ ಸನ್ನಿಧಿಯಲ್ಲಿ ನಾಗತಂಬಿಲ ಸೇವೆ. ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ. ಸಂಜೆ 5ರಿಂದ ಭಂಡಾರ ಬರುವುದು, ಸಂಜೆ 6ರಿಂದ ಕುಮಾರ ದರ್ಶನ, ರಾತ್ರಿ 7ರಿಂದ ಶ್ರೀ ದೇವರ ಉತ್ಸವ, ವಸಂತಕಟ್ಟೆ ಪೂಜೆ, ಶ್ರೀ ಅಬ್ಬಗ ದಾರಗರ ಚೆನ್ನೆಮಣೆ ಆಟ, ಸಾರ್ವಜನಿಕ ಅನ್ನಸಂತರ್ಪಣೆ, ಮೂಲ ಮಹಿಷಂತಾಯ, ರಕ್ತೇಶ್ವರಿ, ಪ್ರಧಾನ ದೈವ ಸೇಮಕಲ್ಲ ಪಂಜುರ್ಲಿ ನೇಮೋತ್ಸವ. ರಾತ್ರಿ 2 ರಿಂದ ಕುಮಾರ – ಪಂಜುರ್ಲಿ ದೈವದ ಭೇಟಿ ಪ್ರಸಾದ ವಿತರಣೆ, ಸಂಜೆ ಗಂಟೆ 5 ರಿಂದ ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳ ಇವರಿಂದ ಭಕ್ತಿ ಹೆಜ್ಜೆ – ಕುಣಿತ ಭಜನೆ, ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ – ಊರ ಹಾಗೂ ಪರಊರ ಕಲಾವಿದರಿಂದ, ರಾತ್ರಿ 8 ರಿಂದ ಸಿದ್ಧಿವಿನಾಯಕ ಕಲಾ ತಂಡ ಗುರಿಪಳ್ಳ ಹಾಗೂ ಅತಿಥಿ ಕಲಾವಿದರಿಂದ ‘ಕಂಡುವೆರ್….! ಜಾಗ್ರತೆ’ ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಮಾ.25 ರಂದು ಬೆಳಿಗ್ಗೆ 6ರಿಂದ ಗಣಹೋಮ, ರುದ್ರಾಭಿಷೇಕ, ಮಹಾಪೂಜೆ, ಶ್ರೀ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಪುಣ್ಯಾಹ, ಸ್ಥಳಶುದ್ಧಿ, ಕಲಾತತ್ವ ಹೋಮ, ಸರ್ವ ಪ್ರಾಯಶ್ಚಿತ್ತ ಪ್ರತಿಷ್ಠಾ ವಧಂತ್ಯುತ್ಸವದ ವಿಶೇಷ ಪೂಜೆ, ಬೆಳಿಗ್ಗೆ 11 ರಿಂದ ಆಶ್ಲೇಷಾ ಬಲಿ-ಶ್ರೀ ನಾಗದರ್ಶನ ಸೇವೆ ಮಧ್ಯಾಹ್ನ ಶ್ರೀ ದೇವರ ಉತ್ಸವ, ಶ್ರೀ ನಾಗದೇವರ ಹಾಗೂ ಶ್ರೀ ಲೋಕನಾಥೇಶ್ವರ ದೇವರ ಭೇಟಿ, ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ. ಸಂಜೆ 6 ರಿಂದ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 7.30ಕ್ಕೆ ಕುಮಾರ ದರ್ಶನ, ದೇವರ ಉತ್ಸವ, ಕಟ್ಟೆ ಪೂಜೆ, ವಾರ್ಷಿಕ ‘ನಡ್ವಾಲ್ ಸಿರಿಜಾತ್ರೆ’, ಸಾರ್ವಜನಿಕ ಅನ್ನ ಸಂತರ್ಪಣೆ. ಸಂಜೆ 6.30ರಿಂದ ತಾಲೂಕು ವಿವಿಧ ಭಜನಾ ತಂಡಗಳಿಂದ ಭಜನಾ ಮಂಗಳೋತ್ಸವ ಭಾವ – ಗಾನ – ಕುಣಿತ, ರಾತ್ರಿ ೯ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಕ್ತಿಗೀತೆ – ಭಾವಗೀತೆ – ಜನಪದ ಗೀತೆ ದಾಸರ ಪದಗಳ ಸಂಗೀತ ಕಾರ್ಯಕ್ರಮ ಹಾಗೂ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.

ಮಾ.26ರಂದು ಬೆಳಿಗ್ಗೆ ಗಣಹೋಮ, ರುದ್ರಾಭಿಷೇಕ, ಶ್ರೀ ದೇವರ ಬಲಿ, ಮಹಾಪೂಜೆ, ಸಂಜೆ 7ರಿಂದ ಭಜನ್ ಸಂಧ್ಯಾ ನಡೆಯಲಿದೆ.
ಮಾ.27 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಶ್ರೀ ದೇವರ ಬಲಿ, ಗ್ರಾಮ ದೈವ ಪಿಲಿಚಾಮುಂಡಿ ದೈವದ ನೇಮ, ಅವಕೃತ ಸ್ನಾನ, ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಧ್ವಜಾವರೋಹಣ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿರುವುದು.

Leave a Comment

error: Content is protected !!