31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲೋಕಸಭಾ ಚುನಾವಣೆ ಹಿನ್ನೆಲೆ: ಸಿಯೋನ್ ಆಶ್ರಮ ರಜತಮಹೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಮುಂದೂಡಿಕೆ

ನೆರಿಯ: ಸಿಯೋನ್ ಆಶ್ರಮವು ಕಳೆದ 25 ವರ್ಷಗಳಿಂದ ಅಶಕ್ತ, ಅನಾಥ ಮತ್ತು ವಿಶೇಷಚೇತನರನ್ನು ಯಾವುದೇ ಜಾತಿ- ಮತ, ಬೇಧ-ಭಾವವಿಲ್ಲದೆ ಮಾತೃವಾತ್ಸಲ್ಯತೆಯಿಂದ ಆರೈಕೆ ಮಾಡುತ್ತಾ ಬಂದಿರುತ್ತದೆ. ಮಾ.22ರಂದು ಸಿಯೋನ್ ಆಶ್ರಮವು ತನ್ನ ಸೇವೆಯ 25 ಸಂವತ್ಸರಗಳನ್ನು ಪೂರ್ಣಗೊಳಿಸಿರುತ್ತದೆ. ಈ ಸಂದರ್ಭದಲ್ಲಿ “ಸಿಯೋನ್ ರಜತಮಹೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮ”ವನ್ನು ಜಂಟಿಯಾಗಿ ಆಚರಿಸಲು ಮಾ.21 ಮತ್ತು ಮಾ.22 ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಲೋಕಸಭೆ ಚುನಾವಣೆಯ ಪ್ರಯುಕ್ತ ಚುನಾವಣಾ ಆಯೋಗವು ಕಟ್ಟುನಿಟ್ಟಿನ ನೀತಿಸಂಹಿತೆ ಜಾರಿಗೊಳಿಸಿದೆ. ಆದುದರಿಂದ “ಸಿಯೋನ್ ಬೆಳ್ಳಿಹಬ್ಬ” ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯಾತಿಗಣ್ಯರಿಗೆ ಬರಲು ಅನಾನುಕೂಲವಾಗುವುದರಿಂದ ನಿಗದಿಪಡಿಸಲಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಸಿಯೋನ್ ಆಶ್ರಮದ ಮಾನೇಜಿಂಗ್ ಟ್ರಸ್ಟಿ ಯುಸಿ ಪೌಲೋಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಲಾಯಿಲ: 35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ‌ ಸಂಭ್ರಮದ ಬಕ್ರೀದ್ ಆಚರಣೆ

Suddi Udaya

ಕಲ್ಮಂಜ ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ ಸಂಭ್ರಮ

Suddi Udaya

ಬೆಳ್ತಂಗಡಿ: ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ

Suddi Udaya

ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ: ಕೊಕ್ಕಡ ವಿನು ಸ್ಕೂಲ್ ಆಫ್ ಆರ್ಟ್ಸ್ ನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಎಸ್ ವಿ ಟಿ ಟೀಮ್ ಪಟ್ರಮೆ ವತಿಯಿಂದ ದೀಪಾವಳಿ ಪ್ರಯುಕ್ತ ವಾಲಿಬಾಲ್ ಪಂದ್ಯಾಟ

Suddi Udaya
error: Content is protected !!