23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ : ಬೆನಕ ಹೆಲ್ತ್ ಸೆಂಟರ್ ನಲ್ಲಿ ಯಶಸ್ವಿನಿ ಯೋಜನೆಯಲ್ಲಿ ಯಶಸ್ವಿ ಮೊಣಕಾಲಿನ ಬದಲಿ ಶಸ್ತ್ರ ಚಿಕಿತ್ಸೆ

ಉಜಿರೆ : ರೈತರೇ ಹೆಚ್ಚಾಗಿರುವ ಸಹಕಾರಿ ಸಂಘದ ಸದಸ್ಯರುಗಳಿಗೆ ಸರಕಾರ ನೀಡಿರುವ ಯಶಸ್ವಿನಿ ಯೋಜನೆಯಲ್ಲಿ ಇದೀಗ ಗ್ರಾಮೀಣ ಪ್ರದೇಶದಲ್ಲಿರುವ ಬೆನಕ ಹೆಲ್ತ್ ಸೆಂಟರ್ ಉಜಿರೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಎನ್ ಸಿ ಜಯರಾಮ್ ಯಶಸ್ವಿನಿ ಯೋಜನೆಯ ಫಲಾನುಭಾವಿಯಾಗಿದ್ದು, ಇವರಿಗೆ ಮಾ.14 ರಂದು ಬಲಕಾಲಿನ ಮೊಣಗಂಟು ಬದಲಿ ಶಸ್ತ್ರಚಿಕಿತ್ಸೆಯು (Total Knee replacement) ಯಶಸ್ವಿನಿ ಯೋಜನೆಯಡಿಯಲ್ಲಿ ಆಗಿದ್ದು, ಮಂಗಳೂರಿನ ಖ್ಯಾತ ಮೂಳೆ ತಜ್ಞರಾದ ಡಾ .ವಿಕ್ರಂ ಶೆಟ್ಟಿ, ಬೆನಕ ಆಸ್ಪತ್ರೆಯ ಎಲುಬು ಮತ್ತು ಮೂಳೆ ತಜ್ಞರಾದ ಡಾ. ರಜತ್, ವೈದ್ಯಕೀಯ ನಿರ್ದೇಶಕರಾದ ಡಾ ಗೋಪಾಲಕೃಷ್ಣರನ್ನು ಒಳಗೊಂಡ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿಸಿದರು.

ಈಗ ರೋಗಿಯು ಉತ್ತಮವಾಗಿ ನಡೆಯುತ್ತಿದ್ದಾರೆ. ಯಶಸ್ವಿನಿ ಯೋಜನೆಯು ಗ್ರಾಮೀಣ ರೈತರಿಗೆ ವರದಾನವಾಗಿದೆ. ಅತ್ಯಂತ ಕ್ಲಿಷ್ಟ ಹಾಗೂ ಪಟ್ಟಣ ಪ್ರದೇಶದಲ್ಲಿ ನಡೆಸುವ ಈ ಶಸ್ತ್ರ ಚಿಕಿತ್ಸೆಯು ಇದೀಗ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ನಡೆದಿದ್ದು ಹೆಮ್ಮೆಯ ವಿಷಯ ಎಂದು ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಇವರು ಪತ್ರಿಕಾ ಮಾದ್ಯಮಕ್ಕೆ ತಿಳಿಸಿದರು.

Related posts

ಲೋಕಸಭಾ ಚುನಾವಣೆ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿ ಸ್ವಚ್ಛತಾ ಕಾರ್ಯ

Suddi Udaya

ಫೆ.18: ಬಳಂಜ ಶಾಲೆಯ 75 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಚಿಂತನಾ ಕಾರ್ಯಾಗಾರ

Suddi Udaya

ಕಾಯರ್ತಡ್ಕ : ಪುತ್ಯೆ ನಿವಾಸಿ ಮೋಹನ ಗೌಡ ಹೃದಯಾಘಾತದಿಂದ ನಿಧನ

Suddi Udaya

ಉಜಿರೆ : ರತ್ನಮಾನಸ ನಿಲಯದಲ್ಲಿ ಮಕರ ಸಂಕ್ರಾಂತಿ ಆಚರಣೆ

Suddi Udaya

ಕಳೆಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಶಾಸಕ ಹರೀಶ್ ಪೂಂಜರಿಂದ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya
error: Content is protected !!