23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ: ಚಪ್ಪರ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟನೆ

ಬೆಳ್ತಂಗಡಿ :ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮೊದಲ ದಿನ ಇಂದು ದೇವಸ್ಥಾನದಲ್ಲಿ ಚಪ್ಪರ ಉದ್ಘಾಟನೆ ನೆರವೇರಿತು.

ಚಪ್ಪರ ಉದ್ಘಾಟನೆಯನ್ನು ಯು. ಗೋಪಾಲಕೃಷ್ಣ ಗೌಡ , ವಳಂಬ್ರ ಆಲಂಗಾವು ಇವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಅಧ್ಯಕ್ಷರಾದ ಬಿ.ಕೆ ಧನಂಜಯ ರಾವ್, ಜೀರ್ಣೋದ್ಧಾರ ಸಮಿತಿಯ ಲೋಕೇಶ್ ರಾವ್, ಚಪ್ಪರ ಸಮಿತಿಯ ಸಂಚಾಲಕರಾದ ಕೇಶವ ಎಮ್.ಕೆ ಗೌರವ ಸಲಹೆಗಾರರಾದ ರಾಜು ದಿಡುಪೆ, ಆನಂದ ಆಚಾರ್ಯ, ಹಾಗೂ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಭಕ್ತರು ಉಪಸ್ಥಿತರಿದ್ದರು ಚಪ್ಪರ ಉದ್ಘಾಟನೆಯಧಾರ್ಮಿಕ ವಿಧಿವಿಧಾನ ದೇವಸ್ಥಾನದ ಅರ್ಚಕರಾದ ಸುನಿಲ್ ಭಟ್ ನೆರವೇರಿಸಿದರು.

ಭಜನಾ ಕಾರ್ಯಕ್ರಮ ಉದ್ಘಾಟನೆ :

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮೊದಲ ದಿನ ಇಂದು ಶ್ರೀ ದುರ್ಗಾಪರಮೇಶ್ವರಿ ಪ್ರದಾನ ವೇದಿಕೆಯಲ್ಲಿ ಭಜನಾ ಕಾರ್ಯಕ್ರಮ ಉದ್ಘಾಟನೆ ನೆರವೇರಿತು
ಈ ಭಜನಾ ಕಾರ್ಯಕ್ರದ ಉದ್ಘಾಟನೆ ಮಧ್ವಾದೀಶ ವಿಠಲದಾಸ ನಾಮಾಂಕಿತ ಭಜನಾ ಸಂಪನ್ಮೂಲ ವ್ಯಕ್ತಿಗಳಾದ ರಾಮಕೃಷ್ಣ ಕಾಟುಕುಕ್ಕೆ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬಿಕೆ ಧನಂಜಯ ರಾವ್, ಕಾರ್ಯದರ್ಶಿ ದಾಸಪ್ಪ ಗೌಡ ಕಾಂಜಾನು, ಕೋಶಾಧಿಕಾರಿ ವಾಸುದೇವ ರಾವ್ ಕಕ್ಕೆನೇಜಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಬಿಕೆ ಲೋಕೇಶ್ ರಾವ್, ವ್ಯವಸ್ಥಾಪನಾ ಸಮಿತಿ ಆಡಳಿತಾಧಿಕಾರಿ ಮೋಹನ್ ಬಂಗೇರ, ಭಜನಾ ಸಮಿತಿಯ ಸಂಚಾಲಕರಾದ ಗಣೇಶ್ ಗೌಡ ಪಗರೆ, ಉಪಸ್ಥಿತರಿದ್ದರು.

Related posts

ಮಹೇಶ್ ಶೆಟ್ಟಿ ತಿಮರೋಡಿ, ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಜಾ

Suddi Udaya

ಶಕ್ತಿ ಯೋಜನೆಗೆ ಶಕ್ತಿ ತುಂಬಿದ ಪುರುಷರು

Suddi Udaya

ಹೃದಯ ಸಮಸ್ಯೆಯಿಂದ ಮೃತಪಟ್ಟ ಬಾಲಕ ಅಶ್ವಿನ್ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ದ.ಕ ಜಿಲ್ಲಾ ಶಾಲಾ ಕಾಲೇಜುಗಳಿಗೆ 2ದಿನ ರಜೆ ಘೋಷಣೆ

Suddi Udaya

ಬಂದಾರು : ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ ವಾರ್ಷಿಕ ಪೂಜಾ ಕಾರ್ಯಕ್ರಮದ ಪೂರ್ವಭಾವಿ ಸಭೆ

Suddi Udaya
error: Content is protected !!