38.6 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನಿಂದ ಲಿಂಗ ಸಮಾನತೆ ಬಗ್ಗೆ ತರಬೇತಿ

ಬೆಳ್ತಂಗಡಿ : ಶಕ್ತಿ ಸಾಮರ್ಥ್ಯವನ್ನು ಬೆಳೆಸಿದಾಗ ನಾವು ಕೂಡ ಬೆಳೆಯುತ್ತೇವೆ. ಸಮಾಜದಲ್ಲಿ ಬದಲಾವಣೆ ನಮ್ಮಿಂದ ಆಗಬೇಕಾಗಿದೆ ಎಂದು ಮಾ. 20 ರಂದು ಸಾಂತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಿದ ಲಿಂಗ ಸಮಾನತೆ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ.ಬಿನೋಯಿ ಎ.ಜೆ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಎಲಿಯಮ್ಮ ತೋಮಸ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಿ. ನ್ಯಾನ್ಸಿ ಲೋಬೊ, ಮಹಿಳಾ ಸಬಲೀಕರಣ ಯೋಜನೆಯ ರಾಜ್ಯ ಸಂಯೋಜಕರು, ಕ್ರಾಸ್ ಸಂಸ್ಥೆ ಬೆಂಗಳೂರು ಇವರು ಲಿಂಗ ಸಮಾನತೆ ಮತ್ತು ಲಿಂಗತ್ವದ ವಿಚಾರಗಳ ಬಗ್ಗೆ ತರಬೇತಿ ನೀಡಿದರು. ಮಹಿಳಾ ಒಕ್ಕೂಟ ಮತ್ತು ಮಹಾಸಂಘ ಸದಸ್ಯರು ಹಾಗೂ ಸಂತ ಎಲೋಶಿಯಸ್ ಕಾಲೇಜು ಮಂಗಳೂರು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಇಲ್ಲಿನ ಸಮಾಜ ಕಾರ್ಯ ವಿಭಾಗ ವಿಧ್ಯಾರ್ಥಿಗಳು ಡಿ.ಕೆ.ಆರ್.ಡಿ.ಎಸ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಡೈಸಿ ಜೋಯ್ ಎಲ್ಲರನ್ನು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಶ್ರೀಮತಿ ಲಲಿತಾ ವಂದಿಸಿದರು. ಕಾರ್ಯಕರ್ತರಾದ ಮಾರ್ಕ್ ಡಿ ಸೋಜ ರವರು ಕಾರ್ಯಕ್ರಮ ನಿರೂಪಿಸಿದರು.

Related posts

ಫೆ.24: ಗುರುವಾಯನಕೆರೆಯಲ್ಲಿ ನಿಸರ್ಗ ಆರ್ಕೇಡ್ ಲೋಕಾರ್ಪಣೆ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಮತ್ತು ಪುತ್ತೂರು ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟ‌ರ್ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಪುದುವೆಟ್ಟು: ನಡ್ಯೇಲು ಕಾಡಾನೆ ದಾಳಿ : ಅಪಾರ ಕೃಷಿ ಹಾನಿ

Suddi Udaya

ಬೆಳ್ತಂಗಡಿ ಚರ್ಚ್ ಗಳಲ್ಲಿ ಗುಡ್ ಫ್ರೈಡೆ ಆಚರಣೆ

Suddi Udaya

ಎ.18: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ನಾಮಪತ್ರ ಸಲ್ಲಿಕೆ

Suddi Udaya

ಆರ್‌ಎಸ್‌ಎಸ್ ಮುಖಂಡ ಮೋಹನ್ ರಾವ್ ಕಲ್ಮಂಜ ರವರನ್ನು ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ

Suddi Udaya
error: Content is protected !!