ಶಿರ್ಲಾಲು: ಶ್ರೀ ಸತ್ಯಸಾರಮುಪ್ಪಣ್ಯ ದೈವಸ್ಥಾನ ನೆಲ್ಲಿಗುಡ್ಡೆ & ಜಾತ್ರಾ ಸಮಿತಿ ಶಿರ್ಲಾಲು-ಕರಂಬಾರು-ನಲ್ಲಾರು ಗ್ರಾಮಗಳ ಕೂಡುವಿಕೆಯಿಂದ ಮಾ.22 ರಂದು ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನದ ಸನ್ನಿಧಿಯಲ್ಲಿ ಅರ್ಚಕರರಾದ ಸೂರ್‍ಯನಾರಾಯಣ ರಾವ್ ಪೌರೋಹಿತ್ಯದಲ್ಲಿ 22ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಲಿರುವುದು.
ಮಾ.20 ರಂದು ಬೆಳಿಗ್ಗೆ ಜಾತ್ರಾ ಮುಹೂರ್ತ, ಮಾ.22 ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಗಣಹೋಮ, ಕಲಶಾಭಿಷೇಕ, ದೈವಗಳಿಗೆ-ಪಂಚಪರ್ವ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಜಯರಾಮ್ ಕರಂಬಾರು ಮ್ಯೂಸಿಕಲಿ ಬಳಗದವರಿಂದ ಎದೆತುಂಬಿ ಹಾಡುವೆನು, ಸಂಗೀತ ರಸಮಂಜರಿ ಮತ್ತು ಕರಂಬಾರು, ಶಿರ್ಲಾಲು ಗ್ರಾಮದ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಶಿರ್ಲಾಲು ಪುದ್ದರಬೈಲು ದಿ| ಬೂಬ ಇವರ ಮನೆಯಿಂದ ಕಾನದ-ಕಟದ ಹಾಗೂ ಪರಿವಾರ ದೈವಗಳ ಭಂಡಾರ ಹೊರಡುವುದು. ರಾತ್ರಿ ಸಭಾ ಕಾರ್ಯಕ್ರಮ, ಕಾನದ-ಕಟದರ ದರ್ಶನ ಸೇವೆ, ಶ್ರೀ ಚಾಮುಂಡಿ, ಗುಳಿಗ ಗಗ್ಗರ ಸೇವೆ, ರಾತ್ರಿ 12 ಗಂಟೆಗೆ ಲಕ್ಕಿಡಿಪ್ ಡ್ರಾ ನಡೆಯಲಿದೆ.
ಮಾ.23ರಂದು ಬೆಳಿಗ್ಗೆ ಅಲೇರಾ ಪಂಜುರ್ಲಿ ಗಗ್ಗರ ಸೇವೆ, ರಾತ್ರಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರ್ಲಾಲು ನೆಲ್ಲಿಗುಡ್ಡೆ ಶ್ರೀ ಸತ್ಯಸಾರಮುಪ್ಪಣ್ಯ ದೈವಸ್ಥಾನದ ಜಾತ್ರಾ ಸಮಿತಿ ಅಧ್ಯಕ್ಷ ರವಿ ಕುಂಟಲಕಜೆ ವಹಿಸಲಿದ್ದಾರೆ. ಮೂಡಬಿದ್ರೆ ಆಳ್ವಾಸ್ ಕಾಲೇಜು ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಬಾಬು ಎ. ತಿಳಿಸಿದ್ದಾರೆ.