37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳೆಂಜ ರಾಜು ಜೋಸೆಫ್ ಅವರ ಸಾವು ಪ್ರಕರಣ ಯಾವುದೋ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಮಗನಿಂದ ಠಾಣೆಗೆ ದೂರು

ಕಳೆಂಜ: ಇಲ್ಲಿಯ ಕಳೆಂಜ ನಿವಾಸಿ ರಾಜು ಜೋಸೆಫ್ ಅವರು ಯಾವುದೋ ಅನಾರೋಗ್ಯದಿಂದ ಮೃತಪಟ್ಟಿರು‌ವುದಾಗಿ ಅವರ ಪುತ್ರ ಟೋನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆಂಜ ಗ್ರಾಮ ನಿವಾಸಿ ಮೃತ ರಾಜು ಜೋಸೆಫ್ ಅವರ ಪುತ್ರ ಟೋನಿ ಎಂಬವರು ನೀಡಿದ ದೂರಿನಂತೆ, ತಂದೆ ರಾಜು ಜೊಸೇಫ್ ರವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟವನ್ನು ಹೊಂದಿದ್ದು, ಮನೆಗೆ ಬಾರದೆ ದೂರದ ಊರಿಗೆ ಹೋಗಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡು, ಬಸ್ಸು ನಿಲ್ದಾಣದ ಬಳಿ ಮಲಗುತ್ತಿದ್ದವರು, ಮೂರು ವರ್ಷದ ಹಿಂದೆ ಮನೆಗೆ ಬಂದು ಹೋದವರು ವಾಪಾಸು ಮನೆಗೆ ಬಂದಿರುವುದಿಲ್ಲ. ಮಾ.20 ರಂದು ರಾಜು ಜೊಸೇಫ್ ರವರ ಕಳೆಬರ ಪುದುವೆಟ್ಟು ಗ್ರಾಮದ ಪದವು ಎಂಬಲ್ಲಿರುವ ಅರಣ್ಯ ಪ್ರದೇಶದಲ್ಲಿ ದೊರೆತಿದ್ದು, ಅಲ್ಲೆ ಇದ್ದ ಬ್ಯಾಗ್ ವೊಂದರಲ್ಲಿ ಆಧಾರ್ ಕಾರ್ಡ್ ಕೂಡಾ ದೊರೆತಿರುವುದಾಗಿ ಮಾಹಿತಿ ಬಂದಿರುತ್ತದೆ. ಸ್ಥಳಕ್ಕೆ ಹೋಗಿ ನೋಡಿದಾಗ, ತನ್ನ ತಂದೆಯ ಕಳೆಬರವೆಂದು ಕಂಡುಬಂದಿದ್ದು, ತಂದೆ ಅರಣ್ಯ ಪ್ರದೇಶದಲ್ಲಿ ಮದ್ಯಪಾನ ಮಾಡಿ ಮಲಗಿದ್ದವರು ಯಾವುದೋ ಅನಾರೋಗ್ಯದಿಂದ ಮೃತಪಟ್ಟಿರು‌ವಂತೆ ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್‌ ಕ್ರಮಾಂಕ:25/2024 ಕಲಂ: 174 ಸಿ ಆರ್‌ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ವಾರ್ಷಿಕೋತ್ಸವ ಹಾಗೂ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಇಂದಬೆಟ್ಟು ಸ.ಹಿ. ಪ್ರಾ. ಶಾಲೆಯ ಎಸ್‌ಡಿಎಂಸಿ ಸಮಿತಿ ರಚನೆ

Suddi Udaya

ವೇಣೂರು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ವಾಹನ ಜಾಥಾ,

Suddi Udaya

ಎಸ್.ಎಸ್.ಎಲ್.ಸಿ ವಾರ್ಷಿಕ ಫಲಿತಾಂಶ: ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ. 97

Suddi Udaya

ಜ.30: ವೇಣೂರುನಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ ಉದ್ಘಾಟನೆ

Suddi Udaya
error: Content is protected !!