24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

ಮಿತ್ತಬಾಗಿಲು: ಇಲ್ಲಿಯ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ/ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.21 ರಂದು ವೇದಮೂರ್ತಿ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ವೈದಿಕ ಕಾರ್ಯಕ್ರಮ ನಡೆಯಿತು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿ ಲೇಖಕರು ಹಾಗೂ ಪತ್ರಕರ್ತರು, ಶ್ರೀಕಾಂತ ಶೆಟ್ಟಿ ರವರು ಧಾರ್ಮಿಕ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ದಂತ ವೈದ್ಯರು ಹಾಗೂ ತುಳು ಶಿವಳ್ಳಿ ಬ್ರಾಹ್ಮಣರ ಸಂಘ ಜಿಲ್ಲಾ ಅಧ್ಯಕ್ಷ ಡಾ| ದಯಾಕರ್ ಎಮ್.ಎಮ್., ವಹಿಸಿದರು.

ಮುಖ್ಯ ಅತಿಥಿಗಳಾಗಿ ಬೆಳಾಲು ಶ್ರೀಕ್ಷೇತ್ರ ಆರಿಕೋಡಿ ಧರ್ಮದರ್ಶಿ ಹರೀಶ ಗೌಡ, ಪುತ್ತೂರು ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರು ಮತ್ತು ಶಾಸನ ತಜ್ಞರು ಡಾ| ವೈ. ಉಮಾನಾಥ ಶೆಣೈ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಮುಂಡಾಜೆ ನಿವೃತ್ತ ಶಿಕ್ಷಕರು ಗೋಪಾಲಕೃಷ್ಣ ರಾವ್ ಅಡೂರು, ಬೆಳ್ತಂಗಡಿ ರೋಟರಿ ಕ್ಲಬ್‌ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ನಿವೃತ್ತ ಬೆಳ್ತಂಗಡಿ ಸರಕಾರಿ ನೌಕರರ ಸಂಘ ಅಧ್ಯಕ್ಷ ವಿಠಲ ಶೆಟ್ಟಿ, ಮಿತ್ತಬಾಗಿಲು ಮಲವಂತಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಧ್ಯಕ್ಷ ಆನಂದ ಗೌಡ ಮೈರ್ನೋಡಿ, ಮಹಾದೇವಿ ಬೈಲುವಾರು ಸಮಿತಿ ಪ್ರಮುಖರು ನಿರಂಜನ ಮಂಟಮೆ, ಮಹಾಲಕ್ಷ್ಮೀ ಬೈಲುವಾರು ಸಮಿತಿ ಪ್ರಮುಖರು ಯಂ. ಚಂದ್ರಶೇಖರ ಗೌಡ ಕುಕ್ಕಾವು, ಮಹಾಗೌರಿ ಬೈಲುವಾರು ಸಮಿತಿ ಪ್ರಮುಖರು ಗಣೇಶ ಕುಂಬಾರ ದುರ್ಗಾನಗರ, ಕಾತ್ಯಾಯಿನಿ ಬೈಲುವಾರು ಸಮಿತಿ ಪ್ರಮುಖರು ಕೆ. ಸುರೇಶ ಪೂಜಾರಿ ಕುಕ್ಕಾವು, ವನದುರ್ಗಾ ಬೈಲುವಾರು ಸಮಿತಿ ಪ್ರಮುಖರು ರಮೇಶ್ ಮಾಂಜ, ಮೂಕಾಂಬಿಕ ಬೈಲುವಾರು ಸಮಿತಿ ಪ್ರಮುಖರು ಕಿರಣ್ ಗೌಡ ಕೋಡಿಯಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ದೇವಳದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದವರಿಗೆ ಗೋಪಾಲಕೃಷ್ಣ ಭಟ್‌ ಮಂಜಿತ್ತಾಯರು, ಕೊಲ್ಲಿ, ಶಂಕರ ನಾರಾಯಣ ತೋಡ್ತಿಲ್ಲಾಯರು ಕೊಲ್ಲಿ, ಶ್ರೀಧರ ಉಪಾಧ್ಯಾಯರು ಮಾರಿಗುಡಿ ಕಿಲ್ಲೂರು, ವೇದ ವಿದ್ವಾನ್ ಸುನಿಲ್ ಗಣಪತಿ ಹೆಗಡೆ, ಹೊನ್ನಾವರ ಇವರಿಗೆ ಗೌರವಿಸಲಾಯಿತು.

ಈ ಸಂದರ್ಭಲ್ಲಿ ಬ್ರಹ್ಮಕಲಶೋತ್ಸವ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಜೀರ್ಣೋದ್ಧಾರ ಸಮಿತಿಯ ಲೋಕೇಶ್ ರಾವ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ರಾವ್, ದಾಸಪ್ಪ ಗೌಡ ಪ್ರಧಾನ ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಸಮಿತಿ , ಕಾಯಾ೯ಧ್ಯಕ್ಷ ಬಿ.ಕೆ ರಾಜಶೇಖರ ರಾವ್, ಚಪ್ಪರ ಸಮಿತಿಯ ಸಂಚಾಲಕರಾದ ಕೇಶವ ಎಮ್.ಕೆ, ಗೌರವ ಸಲಹೆಗಾರರಾದ ರಾಜು ದಿಡುಪೆ, ಆನಂದ ಆಚಾರ್ಯ, ಹಾಗೂ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

Related posts

ಚಾರ್ಮಾಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರದ ದಿಮ್ಮಿಗಳಿದ್ದ ಲಾರಿ ಪಲ್ಟಿ

Suddi Udaya

ಕೊಕ್ಕಡ: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ “ಶ್ರೀ ಲಲಿತಾ ಸಹಸ್ರನಾಮ ಯಾಗ: ಧಾರ್ಮಿಕ ಸಭೆ, ಸನ್ಮಾನ

Suddi Udaya

ಇಂದು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಕೆ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

Suddi Udaya

ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಸಿಂಪನ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ: ಕು. ಸೌಜನ್ಯ ಕೊಲೆ ಪ್ರಕರಣ: ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Suddi Udaya

ಬಳಂಜದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

Suddi Udaya
error: Content is protected !!