27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು: ಅಕ್ರಮವಾಗಿ ಮದ್ಯ ಮಾರಾಟ: ಬೆಳ್ತಂಗಡಿ ಪೊಲೀಸರಿಂದ ದಾಳಿ

ಕೊಯ್ಯೂರು : ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ ಘಟನೆ ಕೊಯ್ಯೂರು ಗ್ರಾಮದ ನೆಕ್ಕಿಲು ಎಂಬಲ್ಲಿ ಮಾ.21 ರಂದು ನಡೆದಿದೆ.

ಕೊಯ್ಯೂರು ಗ್ರಾಮದ ನೆಕ್ಕಿಲ್‌ ಬೆಳಾಲು ಅನಂತೋಡಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುವ ಮಣ್ಣು ರಸ್ತೆಯ ಬದಿ, ಸಾರ್ವಜನಿಕ ಸ್ಥಳದಲ್ಲಿ, ಬೇರೆ ಬೇರೆ ವೈನ್ ಶಾಪ್ ಗಳಿಂದ ವಿಸ್ಕಿ ಸ್ಯಾಚೆಟ್ ಗಳನ್ನು ಖರೀದಿಸಿ ಹೆಚ್ಚು ಹಣಕ್ಕೆ ಮಾರಾಟಕ್ಕೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟುಕೊಂಡಿದ್ದ, ಕೊಯ್ಯೂರು ನಿವಾಸಿ ವಸಂತ (42) ಎಂಬಾತನನ್ನು‌ ವಶಕ್ಕೆ ಪಡೆದ, ಬೆಳ್ತಂಗಡಿ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರಾದ ಮುರುಳೀಧರ ನಾಯ್ಕರವರು ಹಾಗೂ ಸಿಬ್ಬಂದಿಗಳು, ಆತನ ಬಳಿಯಿದ್ದ 90 ಎಂ.ಎಲ್. ಪರಿಮಾಣದ ಒಟ್ಟು 53 ಸ್ಯಾಚೆಟ್‌ ಗಳನ್ನು (ಒಟ್ಟು ಮೌಲ್ಯ ರೂ 2125/- ) ಹಾಗೂ ಮದ್ಯ ಮಾರಾಟದಿಂದ ಸಂಗ್ರಹಿಸಿದ ಒಟ್ಟು ರೂ 230/- ರೂ ನಗದು ಹಣವನ್ನು ಸ್ವಾಧಿನಪಡಿಸಿಕೊಂಡು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ 37/2024 ಕಲಂ: 32.34 ಕೆ ಇ ಆಕ್ಟ್‌ -1965 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸೌರ ಯುಗಾದಿ ವಿಷು ಆಚರಣೆ

Suddi Udaya

ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವ: ರಥೋತ್ಸವ, ಕೊಡಮಣಿತ್ತಾಯ ದೈವದ ನೇಮೋತ್ಸವ

Suddi Udaya

ಉಜಿರೆ ಬದ್ರಿಯ ಜುಮಾ ಮಸೀದಿಯಲ್ಲಿ ವಿಶ್ವ ಪರಿಸರ ದಿನ

Suddi Udaya

ಗೇರುಕಟ್ಟೆ ಆಟೋ-ಚಾಲಕರ ಸಂಘದ ವತಿಯಿಂದ ಸರ್ಪ ಸಂಸ್ಕಾರ ಪೂಜೆ

Suddi Udaya

ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಹತೋಟಿಗೆ ಬಂದ ಬೆಂಕಿ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ನಗರ ಮಹಾಶಕ್ತಿಕೇಂದ್ರ ದಿಂದ ವಿಧಾನಸಭಾ ಚುನಾವಣಾ ಪೂರ್ವ ತಯಾರಿ ಸಭೆ

Suddi Udaya
error: Content is protected !!