24.7 C
ಪುತ್ತೂರು, ಬೆಳ್ತಂಗಡಿ
May 18, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಪುದುವೆಟ್ಟು: ಡಿಸೇಲ್ ಪೈಪ್ ಲೈನ್ ಕೊರೆದು ರೂ. 9 ಲಕ್ಷ ಮೌಲ್ಯದ ಡಿಸೇಲ್ ಕಳ್ಳತನ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: : ಡಿಸೇಲ್ ಪೈಪ್ ಲೈನ್ ಕೊರೆದು 9 ಲಕ್ಷ ರೂ ಮೌಲ್ಯದ ಡಿಸೇಲ್ ಕಳ್ಳತನ ಮಾಡಿದ ಘಟನೆ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ನಡೆದಿದೆ.

ಮಂಗಳೂರು, ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್ ಪೈಪ್ ಮೂಲಕ ಡಿಸೇಲ್ ಸರಬರಾಜು ಆಗುತ್ತಿದ್ದು ಮಾ.16ರ ರಾತ್ರಿಯಿಂದ ಮಾ.19ರ ರಾತ್ರಿಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಡಿಸೇಲ್ ಪೈಪ್ ಲೈನ್ ನಲ್ಲಿ ರಂದ್ರ ಕೊರೆದು 2.5 ಇಂಚು ಹೆಚ್ ಡಿಪಿಇ ಪೈಪ್ ಮೂಲಕ ಅಂದಾಜು 12,000 ಲೀ. ಡಿಸೇಲ್ ನ್ನು ಕಳವು ಮಾಡಿದ್ದಾರೆ. ಕಳವಾದ ಡಿಸೇಲ್ ನ ಮೌಲ್ಯ ರೂ 9,60,000 ಎಂದು ಪರಿಗಣಿಸಲಾಗಿದೆ.

ಘಟನೆಯ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 19/2024 ಕಲಂ: 427,285, 379 ಐ ಪಿ ಸಿ ಕಲಂ 15(2) ಪೆಟ್ರೋನೆಟ್ ಕಾಯ್ದೆ ಕಲಂ 3(2) ಪ್ರಿವೆನ್ಸೆನ್ ಆಫ್ ಡ್ಯಾಮೆಜ್ ಟು ಪಬ್ಲಿಕ್ ಪ್ರಾಪರ್ಟಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Related posts

ವಾಣಿ ಕಾಲೇಜು: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ

Suddi Udaya

ಹಳೆಪೇಟೆ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

Suddi Udaya

ಕೊಕ್ಕಡ ಅಮೃತ ಗ್ರಾ.ಪಂ. ನಿಂದ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಇಳಂತಿಲ ಗ್ರಾ.ಪಂ. ಸದಸ್ಯೆ ರೇಖಾ ನಿಧನ

Suddi Udaya

ಬೆಳ್ತಂಗಡಿ ಕುಂಬಾರ ಸೇವಾ ಸಂಘ ವತಿಯಿಂದ ಆಯೋಜಿಸಿದ ಮಹಮ್ಮಾಯಿ ಟ್ರೋಫಿ -2025 ಕಾರ್ಯಕ್ರಮದಲ್ಲಿ ಚಂದ್ರಹಾಸ ಕುಂಬಾರ ಬಂದಾರು ಇವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ಗೌರವ

Suddi Udaya

ಉಜಿರೆಯ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!