ಕಲ್ಮಂಜ: ಶ್ರೀ ನಾಗಬ್ರಹ್ಮ, ಮಹಿಷಂತಾಯ, ರಕ್ತೇಶ್ವರೀ ಅಂಗಣಪಂಜುರ್ಲಿ, ಗುಳಿಗ ದೈವಗಳ ಸಾನಿಧ್ಯದಲ್ಲಿ ಜೋತಿಷ್ಯ ಡಾ. ಯತೀಶ್ ಆರ್. ಪೊದುವಾಳ್‌ರವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಪೂಂಜ ವಿದ್ವಾನ್ ಪ್ರಕಾಶ್ ಆಚಾರ್ಯ ಇವರ ಪೌರೋಹಿತ್ಯದಲ್ಲಿ ನಾಗದೇವರು ಹಾಗೂ ದೈವಗಳ ಪುನರ್ ಪ್ರತಿಷ್ಠೆಯು ಮಾ.22ರಂದು ನಿಡಿಗಲ್ ಮಜಲಿನಲ್ಲಿ ನಡೆಯಿತು.
ಮಾ.21ರಂದು ಸಂಜೆ ಆಲಯ ಪರಿಗ್ರಹ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಪಾಲಕ ಬಲಿ, ಬಿಂಬಶುದ್ಧಿ, ಬಿಂಬಾಧಿವಾಸ ನಡೆಯಿತು.
ಮಾ.22ರಂದು ಬೆಳಿಗ್ಗೆ ಪುಣ್ಯಾಹ ವಾಚನ, ಗಣಪತಿ ಹೋಮ, ನಾಗದೇವರ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಕಲಶಾಧಿವಾಸ, ಪ್ರಧಾನ ಹೋಮ, ಪ್ರಾಯಶ್ಚಿತ್ತ ಹೋಮ, ಪಂಚಾಮೃತ ಕಲಶಾಭಿಷೇಕ ನಡೆಯಿತು.
ಮಧ್ಯಾಹ್ನ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪರ್ವ, ಆಶ್ಲೇಷಾ ಬಲಿ ಪ್ರಸನ್ನ ಪೂಜೆ, ವಟು ಆರಾಧನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.