28.3 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಿಡ್ಲೆ: ಅಕ್ರಮ ವೈನ್ ದಾಸ್ತಾನು ಸ್ಟೋರ್ ಮೇಲೆ ಬೆಳ್ತಂಗಡಿ ಅಬಕಾರಿ ದಾಳಿ ರೂ.2 ಲಕ್ಷ ಮೌಲ್ಯದ ವೈನ್ ವಶ

ಬೆಳ್ತಂಗಡಿ : ನಿಷೇಧಿತ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಬೆಳ್ತಂಗಡಿ ಅಬಕಾರಿ ದಳದದವರು ದಾಳಿ ನಡೆಸಿದ್ದಾರೆ. ನಿಡ್ಲೆ ಗ್ರಾಮದ ಜಿತೇಂದ್ರ ಎಂಬವರ ಸ್ಟೋರ್ ನಲ್ಲಿ ಹೋಮ್ ಮೇಡ್ ವೈನ್ ವೈನ್ ನನ್ನು ಹೊರ ಜಿಲ್ಲೆಯಿಂದ ಖರೀದಿಸಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅಬಕಾರಿ ದಳದ ಇನ್ಸ್ಪೆಕ್ಟರ್ ಲಕ್ಷ್ಮಣ್ ಉಪ್ಪಾರ್ ಮತ್ತು ತಂಡ ಮಾ.20 ರಂದು ಸಂಜೆ 4 ಗಂಟೆಗೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಹೋಮ್ ಮೇಡ್ ವೈನ್ 306 ಲೀಟರ್ ವಶಪಡಿಸಿಕೊಂಡಿದ್ದು. ಇದರ ಮೌಲ್ಯ ಸುಮಾರು 2,01,960 ಲಕ್ಷ ರೂಪಾಯಿ ಅಗಿದ್ದು.‌ಆರೋಪಿಯನ್ನು ವಶಕ್ಕೆ ಪಡೆದು ಆತನ ವಿರುದ್ಧ ಬೆಳ್ತಂಗಡಿ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಅಬಕಾರಿ ದಳದ ಇನ್ಸ್ಪೆಕ್ಟರ್ ಲಕ್ಷಣ್ ಉಪ್ಪಾರ್, ಹೆಡ್ ಕಾನ್ಸ್‌ಟೇಬಲ್ ಬೋಜ ಕೆ, ವಿನಯ್ , ಶಿವಶಂಕರಪ್ಪ ಮತ್ತು ವಾಹನ ಚಾಲಕ ನವೀನ್ ಭಾಗವಹಿಸಿದರು.

Related posts

ಬೆಳ್ತಂಗಡಿ ಅಖಿಲ ಭಾರತ ಬ್ಯಾರಿ ಮಹಾಸಭಾ ಪ್ರತಿನಿಧಿ ಸಭೆಯ ಪೂರ್ವಭಾವಿ ಸಭೆ

Suddi Udaya

ಕೊಲ್ಪಾಡಿಯಲ್ಲಿ ಮಕ್ಕಳ ಹುಣ್ಣಿಮೆಯ ಪ್ರಯುಕ್ತ ಆಟೋಟ ಸ್ಪರ್ಧೆ ಉದ್ಘಾಟನೆ

Suddi Udaya

ಫೆ.24: ಗುರುವಾಯನಕೆರೆಯಲ್ಲಿ ನಿಸರ್ಗ ಆರ್ಕೇಡ್ ಲೋಕಾರ್ಪಣೆ

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ

Suddi Udaya

ಆ.1: ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ತಾಲೂಕಿನ 5000 ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya

ಸುದ್ದಿ ಉದಯ ಫಲಶ್ರುತಿ: ಸೌತಡ್ಕ ಪಾರ್ಕಿಂಗ್ ಸ್ಥಳದಲ್ಲಿ ನೆಟ್ಟ ಗಿಡಗಳ ಬೇಲಿ ತೆರವು ವರದಿ ಬೆನ್ನಲ್ಲೇ ತೆಗೆದಿದ್ದ ಬೇಲಿಗಳ ಅಳವಡಿಕೆ

Suddi Udaya
error: Content is protected !!