ನಡ: ನಾಡಿನ ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಶ್ರೀ ಸದಾಶಿವ ರುದ್ರ ದೇವಸ್ಥಾನ ಸುರ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರ ಮಹೋತ್ಸವ ಮಾ.18ರಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ಆರಂಭಗೊಂಡಿದ್ದು, ಮಾ.22ರಂದು ಬೆಳಗ್ಗೆ ದೇವರ ದರ್ಶನ ಬಲಿ ಉತ್ಸವ, ಮಹಾಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಡಾ| ಸತೀಶ್ಚಂದ್ರ ಸುರ್ಯಗುತ್ತು, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಧನಂಜಯ ಅಜ್ರಿ ನಡಗುತ್ತು, ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ರಾಜಶೇಖರ ಅಜ್ರಿ, ಬಿ. ಮುನಿರಾಜ ಅಜ್ರಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಾ.18ರಂದು ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ ಮಹಾಪೂಜೆ ರಾತ್ರಿ ರಂಗಪೂಜೆ ದೇವರ ಉತ್ಸವ ನಡೆಯಿತು. ಮಾ.19 ರಂದು ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ನಿತ್ಯಬಲಿ ಮೊದಲಾದ ಕಾರ್ಯಕ್ರಮಗಳು ಜರುಗಿತು. ಮಾ.20ರಂದು ಮಹಾಪೂಜೆ, ನಿತ್ಯಬಲಿ, ಸಂಜೆ ಸುರ್ಯಗುತ್ತು ಮನೆಯಿಂದ ದೈವಗಳ ಭಂಡಾರ ತರಲಾಯಿತು. ನಂತರ ಉತ್ಸವ ಹೊರಟು ವಸಂತಕಟ್ಟೆ ಪೂಜೆ ಜರುಗಿತು. ಮಾ.21ರಂದು ಸೊಡಬಲಿ ಉತ್ಸವ ಬಳಿಕ ಮಹಾಪೂಜೆ ಜರುಗಿತು.
ರಾತ್ರಿ ಉತ್ಸವ ಹೊರಟು ನೃತ್ಯ ಉತ್ಸವ, ರಥಕಟ್ಟೆ ಪೂಜೆ, ಮಹಾಪೂಜೆ, ಶಯನೋತ್ಸವ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.