ವೇಣೂರು: ಪೆರ್ಮುಡದಲ್ಲಿ 31ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಇಂದು ಚಾಲನೆ ನೀಡಲಾಯಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ದೀಪ ಬೆಳಗಿಸುವುದರ ಮೂಲಕ ಕಂಬಳ ಉದ್ಘಾಟಿಸಿ ಮಾತನಾಡಿ ತುಳುನಾಡಿನ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ಜಾನಪದ ಕ್ರೀಡೆ ಕಂಬಳ ಎಂದರು.
ಅಧ್ಯಕ್ಷತೆಯನ್ನು ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಹೆಚ್ ಕೋಟ್ಯಾನ್ ವಹಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ವಿಜಯರಾಜ ಅಧಿಕಾರಿ ಮಾರಗುತ್ತು, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಭಾಸ್ಕರ ಬಲ್ಯಾಯ, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ಅನಿತಾ, ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ತೇಜಾಕ್ಷಿ, ವೇಣೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಪದ್ಮಾಂಬ ಕ್ಯಾಟರಿಂಗ್ ಮಾಲಕ ನಾಗಕುಮಾರ್, ಗುಂಡೂರಿ ಸತ್ಯನಾರಾಯಣ ಭಜನಾ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ ಪಡ್ಡಾಯಿ ಮಜಲು, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಶುಭಕರ ಪೂಜಾರಿ ಸಾವ್ಯ, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ನಿರಂಜನ್ ಕೆ.ಎಸ್., ಕುಕ್ಕೇಡಿ ಹಾಲು ಉತ್ಪಾದರ ಸಹಕಾರ ಸಂಘದ ದಯಾನಂದ ದೇವಾಡಿಗ, ಬಳಂಜ ಗ್ರಾ.ಪಂ ಸದಸ್ಯ ರವೀಂದ್ರ ಬಿ ಅಮೀನ್, ವೇಣೂರು ರಮ್ಯಾ ಫ್ಯಾನ್ಸಿಯ ನಾರಾಯಣ ಪೂಜಾರಿ, ಕುಕ್ಕೇಡಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಸದಾನಂದ, ಎಂ.ರಫೀಕ್ ಬಾಂಬಿಲ, ಜಿ.ಪಂ ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಕಂಬಳದ ಸಲಹೆಗಾರರಾದ ಕರುಣಾಕರ, ಸ್ಟೀವನ್ ಮೋನಿಸ್ ಹಾಗೂ ಕಂಬಳ ಸಮಿತಿ ಪದಾಧಿಕಾರಿಗಳು, ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಹಾಗೂ ಬೆಳ್ತಂಗಡಿ ಗು.ನಾ.ಸೇ.ಸಂ ಪ್ರ.ಕಾ. ನಿತೀಶ್ ಹೆಚ್ ಕೋಟ್ಯಾನ್ ಸ್ವಾಗತಿಸಿದರು.