25.7 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಧಾರ್ಮಿಕವರದಿ

ಶಿಶಿಲ: ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಸಮರ್ಪಣೆ; ಚಂಡಿಕಾಹೋಮ

ಶಿಶಿಲ: ಇಲ್ಲಿಯ ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಶ್ರೀ ಗಡಿ ಚಾಮುಂಡಿ ಅಮ್ಮನವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಮುದ್ಯ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಕೃಷ್ಣಪ್ರಸಾದ ಉಡುಪರ ನೇತೃತ್ವದಲ್ಲಿ ನಡೆಯಿತು.

ಮಾ.22ರಂದು ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ಐಕ್ಯಮತ್ಯ ಹೋಮ, ತತ್ತ್ವಹೋಮ ಕಲಶ, ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ರಾತ್ರಿ ದುರ್ಗಾಪೂಜೆ ಮತ್ತು ಮಹಾಪೂಜೆ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಅಡ್ಡಹಳ್ಳ, ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮಾ.23(ಇಂದು) ಸ್ವಸ್ತಿ ಪುಣ್ಯಾಹವಾಚನ, ಗಣಹೋಮ, ಚಂಡಿಕಾಹೋಮ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಗೌರವಾಧ್ಯಕ್ಷ ಶ್ರೀನಿವಾಸ್ ಮುಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಬ್ರಹ್ಮಣ್ಯ ನೆಲ್ಲಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪರಮೇಶ್ವರ ಗೌಡ ಮಂಡೆಕರ, ಉಪಾಧ್ಯಕ್ಷ ಹರೀಶ್ ಗೌಡ ಹೊಳೆಗಂಡಿ, ಪ್ರಧಾನ ಕಾರ್ಯದರ್ಶಿ ಧರ್ಮಪಾಲಗೌಡ, ಕಾರ್ಯದರ್ಶಿ ಪುನೀತ್ ಗೌಡ, ಕೋಶಾಧಿಕಾರಿ ಮಾಧವ ಪೂಜಾರಿ ದೇನೋಡಿ, ಸದಸ್ಯ ಕುಶಾಲಪ್ಪ ಗೌಡ ಜಿ. ಬದ್ರಿಜಾಲು ಹಾಗೂ ಆಡಳಿತ ಸಮಿತಿಯ ಸದಸ್ಯರು, ಸಲಹೆಗಾರರು, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

ಸಂಜೆ 6 ಗಂಟೆಗೆ ಮಂಟಪ ಸಂಸ್ಕಾರ, ದುರ್ಗಾನಮಸ್ಕಾರ ಪೂಜೆ, ಮಹಾಪೂಜೆ, ಸಂಜೆ 7.00ರಿಂದ ಭಜನಾ ಕಾರ್ಯಕ್ರಮ, ಮತ್ಸ್ಯ ಶಿವದುರ್ಗಾ ಭಜನಾ ಮಂಡಳಿ ಶಿಶಿಲ, ಮಾ.24 ಪ್ರಾತ: ಕಾಲ 6.00 ಸ್ವಸ್ತಿ ಪುಣ್ಯಾಹವಾಚನ, ಬೆಳಗ್ಗೆ 6.30 ಕ್ಕೆ ಗಣಹೋಮ, ಅಷ್ಟೋತ್ತರ ಶತಕಲಶ ಪೂಜೆ ಬೆಳಗ್ಗೆ8.00ಕ್ಕೆ ಭಜನಾ ಕಾರ್ಯಕ್ರಮ ಊರ ವಿವಿಧ ಭಜನಾ ಮಂಡಳಿಗಳಿಂದ ಹಾಗೂ 9.58 ರ ವೃಷಭ ಲಗ್ನ ಸುಮುಹೂರ್ತದಲ್ಲಿ, ಚಾಮುಂಡೇಶ್ವರಿಗೆ “ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.

Related posts

ಮದ್ದಡ್ಕ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ವಿ.ಹಿಂ.ಪ ಬಜರಂಗದಳ ಪ್ರಖಂಡದ ವತಿಯಿಂದ ಬಕ್ರೀದ್ ಹಬ್ಬದ ಸಂದರ್ಭ ಗೋ ಹತ್ಯೆಯನ್ನು ಖಂಡಿಸಿ ಪೋಲಿಸ್ ಠಾಣೆ ಮತ್ತು ಗೋ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ

Suddi Udaya

ಬೆಳ್ತಂಗಡಿ : ಬಿಜೆಪಿಯ ಹಿರಿಯ ಕಾರ್ಯಕರ್ತ ದಿ| ಬಿ. ವಿಠಲ್ ಭಟ್ ರವರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಯು.ಕೆ ಮುಹಮ್ಮದ್ ಹನೀಫ್ ನೇಮಕ

Suddi Udaya

ನಾಡಿನಾದ್ಯಂತ ನವರಾತ್ರಿ ಸಂಭ್ರಮ; ಕರಾವಳಿಯಲ್ಲಿ ಮಾರ್ನೆಮಿ ವೇಷಗಳ ಸದ್ದು ಆರಂಭ

Suddi Udaya

ಲಾಯಿಲ: ಪ್ರಸನ್ನ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

Suddi Udaya
error: Content is protected !!