September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ: ಪ್ರಸನ್ನ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಲಾಯಿಲ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಇತ್ತೀಚಿಗೆ ನಡೆಸಿದ ಬಿ.ಫಾರ್ಮಸಿ (B.Pharm) ಪರೀಕ್ಷೆಗಳಲ್ಲಿ ಪ್ರಸನ್ನ ಫಾರ್ಮಸಿ ಕಾಲೇಜು, ಬೆಳ್ತಂಗಡಿಯ ವಿದ್ಯಾರ್ಥಿಗಳು ಶ್ರೇಷ್ಠ ಶ್ರೇಣಿಗಳನ್ನು ಪಡೆದಿದ್ದು, ಕಾಲೇಜಿನ ಖ್ಯಾತಿಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಪ್ರಥಮ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ಕೀರ್ತಿ (86.7%), ತೃಪ್ತಿ (85.2%) ಮತ್ತು ಅಂಜಲಿ (83.7%), ತೃತೀಯ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಪ್ರಿಯಾ (85.8%), ಶರಣ್ಯಾ (85.8%), ಖತೀಜತುಲ್ ಮುನ್ಹಾಝ(84.2%), ಸೈಯದ್ ಅನ್ವರ್ (83.3%), ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಜಯಶ್ರೀ (86.9%), ಅಮೃತ ಕೆ (84.6%), ಧನ್ಯಶ್ರೀ (83.8%), ಏಳನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ದಿಯಾ ಅನ್ಝಿಟ (87.5%), ಶಿವಯೋಗಿ ಅಲೆನವರ್ (85.8%), ಫಾತಿಮತ್ ತಫೀಮಾ 82.5% ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.


ಪ್ರಥಮ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ನಿಹಾಲ (೮೨.೨%), ಸ್ಮಿತನ್ ಬಿ ಆರ್ (೮೨.೨%), ಭಾಗ್ಯಶ್ರೀ (೮೧.೫%), ಫಾತಿಮತುಲ್ ಮಿಸ್ರಿಯಾ (೮೧.೫%), ಕಾರುಣ್ಯಶ್ರೀ (೮೧.೫%), ಭಾರ್ಗವ್ ಶಂಕರ್ ನಾಯಕ್ (೮೦%), ದಿಶಾಲಿ (೮೦%), ಕೀರ್ತನಾ (೭೮.೯%), ಪವಿತ್ರ ಸಂಗಪ್ಪ ಬಾರಕರ್ (೭೮.೫%), ಮಾಜಿದಾ (೭೭.೪%), ಮೂರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ರೂಪೇಶ್ (೮೧.೭%), ಅಬೆಲ್ ಜೋಸೆಫ್ (೭೭.೫%), ಫಾತಿಮಾ ಅಶ್ರೀನ (೭೬.೭%), ರಾನೆ ತನ್ವಿ ಮಂಗೇಶ್ (೭೬.೭%), ಸಂತ್ರ ಸೌವಿಕ್ ರಂಜಿತ್ (೭೬.೭%), ವಿದ್ಯಾ ಎಸ್ (೭೬.೭%), ಅನ್ವಿತ ಎಂ ಜೆ (೭೬.೫%), ವರ್ಷ ಎಚ್ (೭೫%), ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಫಾತಿಮಾತ್ ಶಬೀಬ (೮೩.೧%), ಭಾನುನಂದನ್ (೮೨.೩%), ಸುಷ್ಮಿತಾ (೮೨.೩%), ಸಲ್ಮಾ ಬಾನು (೮೧.೫%), ಶಶಾಂಕ್ (೮೧.೫%), ಕಿರಣ್ (೭೯.೨%), ಮೇಘಬಾಯಿ ಪಿ ಎಂ (೭೭.೭%), ಜಲಜಾಕ್ಷಿ (೭೬.೯%), ದಿಶಾ ಡಿ (೭೬.೨%), ಅಮೀನತುಲ್ ರಿಂಶ (೭೬.೨%), ಪ್ರತಿಭಾ (೭೬.೨%),

ಏಳನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಸಮೀಮ್ (೮೧.೭%), ಕೇಶಿನಿ (೮೦.೮%), ಖದೀಜತ್ ಮೌಸೀರ (೮೦.೮%), ಆಯಿಶತುಲ್ ಅಫೀಫ (೮೦%), ಕೆ ನವೀನ್ ಕುಮಾರ್ (೮೦%), ಶರಣಮ್ಮ (೭೯.೨%), ಕಾರ್ತಿಕ್ ಎಂ (೭೭.೫%), ಸಂತೋಷ್ (೭೬.೭%), ಯಶವಂತ್ ಜಿ ಟಿ (೭೬.೭%), ಅಭಿನವ್ ಕೃಷ್ಣ (೭೫.೮%) ಅವರು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಈ ಶೈಕ್ಷಣಿಕ ಸಾಧನೆಯು ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಹಾಗೂ ಉನ್ನತ ಮಟ್ಟದ ಮಾರ್ಗದರ್ಶನದ ಫಲಿತಾಂಶವಾಗಿದೆ.

ಅಧ್ಯಾಪಕರ ನಿಷ್ಠೆ ಮತ್ತು ಕಾಲೇಜಿನ ಶೈಕ್ಷಣಿಕ ವಾತಾವರಣವು ಈ ವಿದ್ಯಾರ್ಥಿಗಳ ಶ್ರೇಷ್ಟ ಫಲಿತಾಂಶಕ್ಕೆ ಸಹಕಾರಿಯಾಗಿದ್ದು, ಇದು ಇತರ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ. ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಆಡಳಿತ ಮಂಡಳಿ ಈ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಭವಿಷ್ಯ ಇನ್ನೂ ಉಜ್ವಲವಾಗಲೆಂದು ಹಾರೈಸಿದರು.

Related posts

ಕೊಕ್ಕಡದಲ್ಲಿ ಸ್ವಾಮಿ ಪ್ರಸಾದ್ ಪ್ಯಾರಡೈಸ್ ವಸತಿ ಗೃಹ ಶುಭಾರಂಭ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದ್ವೇಷ ರಾಜಕೀಯ ಹಾಗೂ ಬೆಲೆ ಏರಿಕೆ ಖಂಡಿಸಿ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸಾಧನಾ ಪ್ರಶಸ್ತಿ

Suddi Udaya

ಜಾನಪದ ಸ್ಫರ್ಧಾಕೂಟ: ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ಕರ್ನಾಟಕ ದಲಿತ ಚಳುವಳಿಗೆ 50ರ ಸಂಭ್ರಮ: ಎ.28 ಬೆಳ್ತಂಗಡಿಯಲ್ಲಿ 50 ರ ಸಂಭ್ರಮ ಸಮಾವೇಶ- ದಲಿತ ಸಾಂಸ್ಕೃತಿಕ ವೈವಿಧ್ಯ

Suddi Udaya

ಕೊಯ್ಯೂರು ಪಂಚದುರ್ಗ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!