ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ನಲ್ಲಿ ಡಾ. ಬಿ. ಯಶೋವರ್ಮರವರ ಸವಿನೆನಪಿನಲ್ಲಿ ತಾಂತ್ರಿಕ ವಿಷಯಗಳ ವಿನಿಮಯ ವಿಶೇಷ ಉಪನ್ಯಾಸ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಉಜಿರೆ ಇದರ ಆಶ್ರಯದಲ್ಲಿ ಡಾ ಬಿ ಯಶೋವರ್ಮರವರ ಸವಿನೆನಪಿನಲ್ಲಿ ತಾಂತ್ರಿಕ ವಿಷಯಗಳ ವಿನಿಮಯ ವಿಶೇಷ ಉಪನ್ಯಾಸ ಸರಣಿಯ ಮಾಲಿಕೆ -1 ಜಾಗತಿಕ ತಂತ್ರಜ್ಞಾನ ಹಾಗೂ ಭಾರತೀಯರ ಕೌಶಲ್ಯ ಕ್ಷಮತೆ ಎಂಬ ವಿಷಯದ ಬಗ್ಗೆ ಇಂಗ್ಲೆಂಡ್ ನ ಏರ್ಬಸ್ ವಿಮಾನ ಕಂಪನಿಯ ತಂತ್ರಜ್ಞ ಯೋಗಿಂದ್ರ ಮರವಂತೆ ಇವರಿಂದ ನಡೆಯಿತು.

ಕಾರ್ಯಕ್ರಮದ ಮೊದಲಿಗೆ ಈ ವಿಶೇಷ ಉಪನ್ಯಾಸ ಸರಣಿಯನ್ನು ದಿವಂಗತ ಡಾ ಬಿ ಯಶೋವರ್ಮ ರವರ ಧರ್ಮಪತ್ನಿ ಶ್ರೀಮತಿ ಸೋನಿಯಾ ಯಶೋವರ್ಮ ಅವರಿಂದ ಉದ್ಘಾಟನೆಗೊಂಡಿತು. ಈ ವೇಳೆ ಮಾತಾಡಿದ ಅವರು ದಿವಂಗತ ಡಾ ಬಿ ಯಶೋವರ್ಮ ರವರ ಸಾರ್ಥಕ ಮತ್ತು ಶಿಸ್ತುಬದ್ಧ ಬದುಕು ಎಲ್ಲರಿಗೂ ಪ್ರೇರಣೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಂತರ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟ ಖ್ಯಾತ ಲೇಖಕ ಅಂಕಣಕಾರ ವಿಮಾನ ಕಂಪನಿಯ ತಂತ್ರಜ್ಞ ಯೋಗಿಂದ್ರ ಮರವಂತೆ ಅವರು ಜಗತ್ತಿನ ತಂತ್ರಜ್ಞಾನ ಮತ್ತು ಅದಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ ಹಾಗೂ ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆಗೆ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮವನ್ನು ಕಾಲೇಜಿನ ಮ್ಯಾನೇಜರ್ ಚಂದ್ರನಾಥ್ ಜೈನ್ ಮತ್ತು ಮಿಥುನ್ ಜೈನ್ ವ್ಯವಸ್ಥಿತವಾಗಿ ಆಯೋಜನೆ ಮಾಡಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ, ನಿಖಿತ್ ಧನ್ಯವಾದವಿತ್ತರು. ಸಂಪತ್ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!