25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಇಪಿಎಸ್ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ ಜೆಸಿಐ ಭವನದಲ್ಲಿ ನಡೆದ (EPS) effective Public speaking ತರಬೇತಿ ಕಾರ್ಯಕ್ರಮವನ್ನು ಬೆಳ್ತಂಗಡಿಯ ಮಾತೃಶ್ರೀ ಟೆಕ್ಸ್ ಟೈಲ್ಸ್ ನ ಮಾಲಕರಾಗಿರುವ ಮೋಹನ್ ಸುವರ್ಣ ಉದ್ಘಾಟಿಸಿ ಶುಭಕೋರಿದರು.

ಜೆಸಿಐ ಬೆಳ್ತಂಗಡಿಯ ಅಧ್ಯಕ್ಷ ಹಾಗೂ ಜೆಸಿಐ ಭಾರತದ ವಲಯ ತರಬೇತುದಾರಾದ ರಂಜಿತ್ ಎಚ್ ಡಿ ತರಬೇತಿಯನ್ನು ನಡೆಸಿಕೊಟ್ಟರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಉಪಾಧ್ಯಕ್ಷರಾಗಿರುವ ಪ್ರೀತಮ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಜೆಸಿಐ ಭಾರತದ ವಲಯ 15ರ ಉಪಾಧ್ಯಕ್ಷರಾದ ಜೆಸಿ ಶಂಕರ್ ರಾವ್ ಅತಿಥಿಯಾಗಿ ಭಾಗವಹಿಸಿದರು.

ವೇದಿಕೆಯಲ್ಲಿ ಜೆಸಿಐ ಬೆಳ್ತಂಗಡಿ ಮಹಿಳಾ ಘಟಕದ ಸಂಯೋಜಕರಾದ ಶೃತಿ ರಂಜಿತ್, ಜೆಜೆಸಿ ಅಧ್ಯಕ್ಷರಾದ ಸಮನ್ವತ್ ಕುಮಾರ್, ಕಾರ್ಯಕ್ರಮದ ಸಂಯೋಜಕರಾದ ಜೆಸಿ ರಕ್ಷಿತಾ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಅನುದೀಪ್ ಜೈನ್ ಧನ್ಯವಾದ ಸಲ್ಲಿಸಿದರು. ವೇದಿಕೆ ಆಹ್ವಾನವನ್ನು ಪೂರ್ವ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ, ಜೆಸಿ ವಾಣಿಯನ್ನು ಶಿವಾನಿ ಉದ್ಘೋಷಿಸಿದರು, ಉದ್ಘಾಟಕರ ಪರಿಚಯವನ್ನು ನಮ್ರತಾ, ತರಬೇತುದಾರರ ಪರಿಚಯವನ್ನು ಮಧುಶ್ರೀ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ನಮ್ಮ ಘಟಕದ ಪೂರ್ವಧ್ಯಕ್ಷರುಗಳಾದ ಜೆಸಿ ತುಕಾರಾಮ್, ನಾರಾಯಣ ಶೆಟ್ಟಿ, ಚಿದಾನಂದ ಇಡ್ಯಾ, ಸಂತೋಷ ಪಿ ಕೋಟ್ಯಾನ್ ಬಳಂಜ, ಪ್ರಸಾದ್ ಬಿ ಎಸ್, ಉಪಾಧ್ಯಕ್ಷರಾದ ಶೈಲೇಶ್, ಸದಸ್ಯರಾದ ಜಿತೇಶ್, ರತ್ನಾಕರ ಹಾಗೂ ಜೆಜೆಸಿ ಸದಸ್ಯರು ಭಾಗವಹಿಸಿದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿವೃತ್ತರಾದ ಡಾ| ಎಲ್.ಹೆಚ್ ಮಂಜುನಾಥ್ ಅವರಿಗೆ ಸನ್ಮಾನ

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅದಿತಿ ಮುಗೆರೋಡಿ ತೇರ್ಗಡೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಎಕ್ಸೆಲ್ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: 1 ಸಾವಿರ ಕುಟುಂಬಕ್ಕೆ ರಂಝಾನ್ ಆಹಾರ ಕಿಟ್ ವಿತರಣೆ

Suddi Udaya

ಧರ್ಮಸ್ಥಳ: ನದಿಯ ತೀರದಲ್ಲಿ ಅಪರಿಚಿತ ಶವ ಪತ್ತೆ

Suddi Udaya

ಆ. 7 -16: ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್ ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

Suddi Udaya
error: Content is protected !!