28.3 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಬೂತ್ ಸಂಖ್ಯೆ 163ರ ಅಧ್ಯಕ್ಷ ಉಮಾನಾಥ್ ರವರ ಮನೆಗೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಬೆಳ್ತಂಗಡಿ ಮಂಡಲದ ಪ್ರವಾಸದ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಧರ್ಮಸ್ಥಳ ಗ್ರಾಮದ ಬೂತ್ ಸಂಖ್ಯೆ 163ರ ಬೂತ್ ಅಧ್ಯಕ್ಷರಾದ ಉಮಾನಾಥ್ ಅವರ ಮನೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು, ಸುತ್ತಮುತ್ತಲಿನವರು ಮತ್ತು ಕುಟುಂಬದವರನ್ನು ಸೇರಿಸಿಕೊಂಡು ವಿಭಿನ್ನ ರೀತಿಯಲ್ಲಿ ಆಯೋಜಿಸಬೇಕೆಂಬ ಉತ್ಸಾಹದಿಂದ ಉಮಾನಾಥರು ಅಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದರು..

ನಮ್ಮ ಪಕ್ಷದ ಸಂಘಟನೆಗೆ ಬಲ ತುಂಬುವಂತಹ ಮತ್ತು ಮನೆ ಮನೆ ಭೇಟಿಯ ಮೂಲಕ ಅಸಲಿಗೆ ಚುನಾವಣೆಯನ್ನು ಎದುರಿಸಲಿರುವ ಬೂತ್ ಮಟ್ಟದ ಕಾರ್ಯಕರ್ತರಲ್ಲಿ ತುಂಬಿದ್ದ ಉತ್ಸಾಹವನ್ನು ಕಂಡು ನನ್ನ ಭವಿಷ್ಯದ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಪ್ರೇರಣೆ ನೀಡಿತು ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಜಯಂತ್ ಕೋಟ್ಯಾನ್, ಶ್ರೀನಿವಾಸ್ ರಾವ್, ಜಯಾನಂದ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ಭೂಷಣ್ ಬಾರ್ ಮಾಲಕ ಭಾಸ್ಕರ್ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಮಚ್ಚಿನ : ಬಳ್ಳಮಂಜ ಗಣೇಶ್ ಬಾಳಿಗ ನಿಧನ

Suddi Udaya

ನಡ: ಸಿಡಿಲು ಬಡಿದು 2 ವರ್ಷದ ಮಗು ಅಸ್ವಸ್ತ

Suddi Udaya

ಪಾರೆಂಕಿ ಶ್ರೀ ನಾರಾಯಣ ಗುರು ಸೇವಾ ಸಂಘದ ನೂತನ ಸಮಿತಿ ರಚನೆ

Suddi Udaya

ಗೇರುಕಟ್ಚೆ: ಸಾವಿರ ಕದಳಿ ಬಾಳೆ ಗೊನೆ ಚಮತ್ಕಾರ

Suddi Udaya

ಧರ್ಮಸ್ಥಳ ಭಜನಾ ಕಮ್ಮಟದಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶ

Suddi Udaya
error: Content is protected !!