ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಬೆಳ್ತಂಗಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮ

ಉಜಿರೆ: ವಿಶ್ವ ಹಿಂದೂ ಪರಿಷದ್, ಬಜರಂಗದಳ, ದುರ್ಗಾವಾಹಿನಿ, ಮಾತೃಶಕ್ತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮವು ಆ.೧೪ರಂದು ಉಜಿರೆ ಶಾರದಾ ಮಂಟಪದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ನಡೆಯಿತು

ದೀಪ ಪ್ರಜ್ವಲಿಸುವ ಮೂಲಕ ಛತ್ರಪತಿ ಶಿವಾಜಿ ಭಜನಾ ಮಂಡಳಿ ಉಜಿರೆ ಮತ್ತು ಮತ್ತೂರು ಪಂಚಲಿಂಗೇಶ್ವರ ಭಜನಾ ಮಂಡಳಿ ಚಾರ್ಮಾಡಿ ಇವರಿಂದ ಕುಣಿತ ಭಜನಾ ನಡೆಯಿತು ಭಾರತ ಮಾತೆಗೆ ಪುಷ್ಪಾರ್ಚನೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತಿ ಬೆಳ್ತಂಗಡಿಯ ಅಧ್ಯಕ್ಷ ಸಂಪತ್ ಬಿ. ಸುವರ್ಣ ವಹಿಸಿದ್ದರು. ಸುನೀಲ್ ಕೆ.ಆರ್. ಪ್ರಾಂತ ಧರ್ಮ ಪ್ರಚಾರ ಪ್ರಮುಖ್ ವಿಶ್ವ ಹಿಂದೂ ಪರಿಷತ್ ದಿಕ್ಸೂಚಿ ಭಾಷಣ ಮಾಡಿದರು.

ಪುತ್ತೂರು ವಿ.ಹಿಂ.ಪ ಅಧ್ಯಕ್ಷ ಗುರು ಬಂಟ್ವಾಳ, ವಿ.ಹಿಂ.ಪ.ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಬಜರಂಗದಳ ಬೆಳ್ತಂಗಡಿ ಪ್ರಖಂಡ ಸಂಚಾಲಕ ಸಂತೋಷ್ ಅತ್ತಾಜೆ, ಪದ್ಮನಾಭ ಶೆಟ್ಟಿಗಾರ್ ಉದ್ಯಮಿಗಳು ಉಜಿರೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸತೀಶ್ ನೆರಿಯ ಉಪಾಧ್ಯಕ್ಷರು ವಿ.ಹಿಂ.ಪ ಬೆಳ್ತಂಗಡಿ ಪ್ರಖಂಡ, ಮೋಹನ್ ಬೆಳ್ತಂಗಡಿ ಕಾರ್ಯದರ್ಶಿ ವಿ,ಹಿಂ.ಪ ಬೆಳ್ತಂಗಡಿ ಪ್ರಖಂಡ, ರಮೇಶ್ ಧರ್ಮಸ್ಥಳ ಗೋ ರಕ್ಷಾ ಪ್ರಮುಖ್ ವಿ.ಹಿಂ.ಪ ಬೆಳ್ತಂಗಡಿ ಪ್ರಖಂಡ, ಅನಂತು ಉಜಿರೆ ಗೋ ರಕ್ಷಾ ಪ್ರಮುಖ್ ಬಜರಂಗದಳ ಬೆಳ್ತಂಗಡಿ ಪ್ರಖಂಡ, ನಾಗೇಶ್ ಕಲ್ಮಂಜ ಪ್ರಚಾರ ಮತ್ತು ಪ್ರಸಾರ ಪ್ರಮುಖ್ ವಿ.ಹಿಂ.ಪ ಬಜರಂಗದಳ ಬೆಳ್ತಂಗಡಿ ಪ್ರಖಂಡ ಹಾಗೂ ಹಿಂದೂ ಕಾರ್ಯಕರ್ತರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು ಭಾಗವಹಿಸಿದ್ದರು

ಕಾರ್ಯಕ್ರಮದಲ್ಲಿ ಭಜನಾ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು ಸಭಾ ಕಾರ್ಯಕ್ರಮದ ಬಳಿಕ ಉಜಿರೆ ಪೇಟೆಯಲ್ಲಿ ಜೈಕಾರದೊಂದಿಗೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಕೊನೆಯದಾಗಿ ಉಜಿರೆ ಪೇಟೆಯಲ್ಲಿ ಜಗನ್ನಾಥ ಶೆಟ್ಟಿ ನಿವೃತ್ತ ಯೋಧರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು

ಮೋಹನ್ ಬೆಳ್ತಂಗಡಿ ಕಾರ್ಯದರ್ಶಿ ವಿ.ಹಿಂ.ಪ ಬೆಳ್ತಂಗಡಿ ಪ್ರಖಂಡ ಕಾರ್ಯಕ್ರಮ ನಿರೂಪಿಸಿದರು.

Related posts

ವಲಯ ಮಟ್ಟದ ಕ್ರೀಡಾಕೂಟ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಶಿಶಿಲದಲ್ಲಿ ಮಹಿಳೆಯ ಅಸಹಜ ಸಾವು: ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 46 ಮತದಾನ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಸ್ಥಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ತುಡಿತ ಭಾಗ ಆರು

Suddi Udaya

ಬೆಳ್ತಂಗಡಿ: ಅ.7 ರಂದು ವಿದ್ಯುತ್ ನಿಲುಗಡೆ

Suddi Udaya

ಗೆಜ್ಜೆಗಿರಿ ಆಯುರ್ವೇದಿಕ್ ಕೇಂದ್ರದ ಪ್ರಗತಿ ಕುರಿತು ಸಚಿವ ಮಧು ಬಂಗಾರಪ್ಪ ರವರಿಗೆ ಮನವಿ

Suddi Udaya
error: Content is protected !!