30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ಧ.ಮಂ. ಪದವಿ ಕಾಲೇಜಿನ ಎಂಟರ್ಪ್ರಿನಾರ್ಶಿಪ್ ಡೆವಲಪ್ಮೆಂಟ್ ಸೆಲ್ಲ್ ವಿಭಾಗದ ವತಿಯಿಂದ ಪ್ರೋಡಕ್ಟ್ ಲಾಂಚ್

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಪದವಿ ಕಾಲೇಜಿನ ಎಂಟರ್ಪ್ರಿನಾರ್ಶಿಪ್ ಡೆವಲಪ್ಮೆಂಟ್ ಸೆಲ್ಲ್ ವಿಭಾಗದ ವತಿಯಿಂದ ಮಾ. 25 ರಂದು ಪ್ರೋಡಕ್ಟ್ ಲಾಂಚ್ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಬಿ ಎ ಕುಮಾರ ಹೆಗ್ಡೆ ವಹಿಸಿದ್ದರು, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಮೆಟ್ರೋ ಆಹಾರ ಸಂಸ್ಕರಣಾ ಉದ್ಯಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಜೂಲಿ ಜೋಸೆಫ್ ಟಿ ಇವರು ಆಗಮಿಸಿದ್ದರು.

ಕಾಲೇಜಿನ ತೃತೀಯ ಬಿಎ ವಿಭಾಗದ ರೋಷನ್ ಇವರು ರೈನ್ ಸ್ಕಿನ್ ಕೇರ್, ರೇಂಜ್ ಆಫ್ ಸ್ಕಿನ್ ಕೇರ್ ಎಂಬ ಪ್ರಾಡಕ್ಟ್ ಅನ್ನು ಆವಿಷ್ಕಾರ ಮಾಡಿ ಅದನ್ನು ಇಂದು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿ ಅದರ ಕುರಿತು ಮಾತಾಡಿದರು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು .

ಈ ಸಂದರ್ಭದಲ್ಲಿ ಎಸ್ ಡಿ ಎಂ ಪದವಿ ಕಾಲೇಜಿನ ಎಂಟರ್ಪ್ರಿನಾರ್ಶಿಪ್ ಡೆವಲಪ್ಮೆಂಟ್ ಸೆಲ್ಲ್ ನ ಸಂಯೋಜಕರು, ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರು ಸ್ವಾತಿ ಬಿ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರು ಸುಮಂತ್ ಜೈನ್ ಉಪಸ್ಥಿತರಿದ್ದರು.

ಹೆನ್ರಿ ಮೇಲಿಷ ಸೇರಾವೊ ಸ್ವಾಗತಿಸಿದರು, ಜೇನೀಫರ್ ಸಲ್ದನ್ಹ ಮತ್ತು ಶಿವಾನಿ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಸಂಜೀವಿನಿ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸರಕಾರದಿಂದ ಸಮ್ಮತಿ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನಿಂದ ರೂ. 1ಲಕ್ಷ ದೇಣಿಗೆ

Suddi Udaya

ಬಂದಾರು ಶಕ್ತಿ ಕೇಂದ್ರದಲ್ಲಿ ಬಿಜೆಪಿ ಪೂರ್ವಭಾವಿ ಸಭೆ

Suddi Udaya

ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷರಾಗಿ ವಿಮಲ, ಉಪಾಧ್ಯಕ್ಷರಾಗಿ ಶ್ರೀನಿವಾಸ್ ರಾವ್ ಆಯ್ಕೆ

Suddi Udaya

ಲಾಯಿಲ : ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

Suddi Udaya

ಕೊಕ್ರಾಡಿ: ಹೇರ್ದಂಡಿ ಬಾಕ್ಯಾರು ಗರಡಿಗೆ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಭೇಟಿ,

Suddi Udaya
error: Content is protected !!