ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ 5ನೇ ದಿನದ ಧಾರ್ಮಿಕ ಸಭೆ

Suddi Udaya

ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ 5ನೇ ದಿನದ ಅಂಗವಾಗಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಮಾ.24 ರಂದು ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನ ಹೊರನಾಡು ಧರ್ಮಕರ್ತರು ಭೀಮೇಶ್ವರ ಜೋಶಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ಉಜಿರೆ ಜನಾರ್ದನ ದೇವಸ್ಥಾನ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡ್ವೆಟ್ನಾಯ ವಹಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಪಾರುಪತ್ಯೆಗಾರರು ಲಕ್ಷ್ಮಿ ನಾರಾಯಣ ರಾವ್, ಬೆಂಗಳೂರು ನಂದಿಕಾಡು ಅಲಾಟ್ಮೆಂಟ್ ವಿಭಾಗದ ಮುಖ್ಯಸ್ಥರು ಉಮೇಶ್ ಗೌಡ, ಬಂಗಾಡಿ ಸಿ ಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ ಇರ್ತಿಲಾಲ್, ಸಂತೋಷ್ ಹೆಬ್ಬಾರ್ ಕಿರಿಯಾಡಿ ಉಜಿರೆ, ಚಾರ್ಟೆಡ್ ಅಕೌಂಟೆಂಟ್ ಪ್ರಭಾತ್ ಬಿಕೆ ಬೆಂಗಳೂರು, ಆಚಾರಿ ಬೆಟ್ಟು ಬೆಂಗಳೂರು ಹೈಕೋರ್ಟ್ ವಕೀಲರು ವಿನಯ ಚಂದ್ರ, ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ಅಭ್ಯಂತರರು ಆಚಿತ ವಿ ಎಸ್, ನ್ಯಾಯವಾದಿಗಳು
ಪ್ರಶಾಂತ್ ಬಿಕೆ , ಉಜಿರೆ ಎಸ್ ಡಿ ಎಂ ಉಪನ್ಯಾಸಕ ರಾಜೇಶ್ ಕಲ್ಬೆಟ್ಟು, ಬೆಂಗಳೂರು ಅಂಚೆ ಅಧೀಕ್ಷಕರು ಹರೀಶ್ ಕೊಂಡಾಲು, ಕಡಿರುದ್ಯಾವರ ಕೆರಂಗಿನಡ್ಕ ಪ್ರಭಾಕರ ಶೆಣೈ, ಧನಂಜಯ ಗೌಡ ತಿಮ್ಮಯ್ಯಕಂಡ, ಜಯಂತ್ ಗೌಡ ಕೊಂಡಾಲು, ದಯಾನಂದ ಗೌಡ ಕಲ್ಬೆಟ್ಟು, ಸಂದೀಪ್ ಗೌಡ ಶೆಟ್ಟಿಹಿತ್ಲು, ಶಿವರಾಮ ಗೌಡ ವಿದ್ಯಾನಗರ ಅಡ್ಕ,, ಕೇಶವ ಗೌಡ ಇಲ್ಯರಕಂಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಾಲಯದ ನೌಕರ ವೃಂದದವರಾದ ಎಲ್ ಬಾಲಕೃಷ್ಣ ಗೌಡ ಲಾವುದಡಿ, ಶ್ರೀಮತಿ ಮಮತಾ ಪ್ರವೀಣ್ ಕುಮಾರ್ ಗುಮಾಸ್ತರು ಪರಾರಿ ಗುಡ್ಡೆ, ಕೊಲ್ಲಿ ಸ್ವಚ್ಛತಾ ಕಾರ್ಯಕರ್ತೆ ಕಿನ್ನಿಯಮ್ಮ ಕೆ , ಶ್ರೀಮತಿ ಪ್ರೀತಿಕಾ ಚಾರ್ಮಾಡಿ, ಶ್ರೀಮತಿ ಮೀನಾಕ್ಷಿ ಕೃಷ್ಣ ಕೊಲ್ಲಿ, ಶ್ರೀಮತಿ ಪೂರ್ಣಿಮಾ ಪ್ರವೀಣ್ ನಡ್ತಿಕಲ್ಲು, ಶ್ರೀಮತಿ ಅಮಿತಾ ಪ್ರಶಾಂತ್ ಬೆಳಾಲು ಇವರನ್ನು ಗೌರವಿಸಲಾಯಿತು..


ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಎಸ್ ವಿನಯ ಚಂದ್ರ ಸೇನರ ಬೆಟ್ಟು ಸ್ವಾಗತಿಸಿ, ರಾಮಣ್ಣ ಕುಂಬಾರ ವಂದಿಸಿದರು.
ನೇಮಿರಾಜ ಕಿಲ್ಲೂರು ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!