ಬೆಳ್ತಂಗಡಿ : ಮಾ.22ರಂದು ತುಮಕೂರು ನಲ್ಲಿ ನಡೆದ ಬೆಳ್ತಂಗಡಿಯ ಮೂವರ ಕೊಲೆ ಪ್ರಕರಣ ಕುರಿತು ಎಸ್.ಡಿ.ಪಿ.ಐ ವತಿಯಿಂದ ಬೆಳ್ತಂಗಡಿ ಎಸ್.ಡಿ.ಪಿ.ಐ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಬೆಳ್ತಂಗಡಿ ಎಸ್.ಡಿ. ಪಿ.ಐ ಅಧ್ಯಕ್ಷ ನವಾಜ್ ಶರೀಫ್ ಕಟ್ಟೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ತುಮಕೂರು ನಲ್ಲಿ ನಡೆದಂತಹ ಕೊಲೆ ದೇಶವನ್ನೇ ಬೆಚ್ಚಿ ಬೀಳಿಸಿದಂತಹ ಘಟನೆ. ಸುಮಾರು 6ರಿಂದ 7ತಿಂಗಳ ಸುದೀರ್ಘ ಕಾಲದಲ್ಲಿ ಪಾತರಾಜು ಅಲಿಯಾಸ್ ರಾಜಗುರು ಅಲಿಯಾಸ್ ಸ್ವಾಮಿ ಎನ್ನುವಂತಹ ಒಬ್ಬ ವ್ಯಕ್ತಿ ಇಲ್ಲಿರುವಂತಹ ಇಸಾಕ್ ಎನ್ನುವಂತಹ ವ್ಯಕ್ತಿಯ ಜೊತೆ ಸಂಪರ್ಕವನ್ನು ಬೆಳೆಸಿ, ಅವನ ಜೊತೆ ಒಳ್ಳೆಯ ರೀತಿಯಲ್ಲಿದ್ದ. ನಿಧಿ ಆಸೆಯನ್ನು ತೋರಿಸಿ ರೂ. 60 ಲಕ್ಷದಿಂದ 1 ಕೋಟಿ ವರೆಗೆ ಹಣವನ್ನು ಹಂತ ಹಂತವಾಗಿ ಪಡೆದುಕೊಂಡಿದ್ದಾರೆ. ವ್ಯವಸ್ಥಿತವಾಗಿ ಅವರನ್ನು ಕೊಲೆ ಮಾಡಲಾಗಿದೆ. ಇದನ್ನು ಎಸ್.ಡಿ.ಪಿ ಐ ಖಂಡಿಸುತ್ತಿದೆ. ಯಾರು ಆರೋಪಿಗಳಿದ್ದಾರೆ ಅವರಿಗೆ ಕಠಿಣ ಶಿಕ್ಷೆಯಾಗಬೇಕು.
ಬೆಳ್ತಂಗಡಿ ತಾಲೂಕಿನಲ್ಲಿ ದೊಡ್ಡ ಮಧ್ಯವರ್ತಿಗಳ ದಂದೆ ಇದೆ. ಅವರಿಗೆ ಯಾರೂ ಸಾಲ ಪಡೆದುಕೊಂಡರೂ, ಖಾತೆಗೆ ಹಣ ಜಮೆಯಾದರು ಅದೆಲ್ಲ ಅವರಿಗೆ ತಿಳಿಯುತ್ತಿದೆ. ತುಮಕೂರು ಪೊಲೀಸರು ಮೊದಲು ತನಿಖೆ ಮಾಡಬೇಕಾದದ್ದು ಆ ಮಧ್ಯವರ್ತಿಗಳು ಯಾರೆಂಬುವುದನ್ನು. ಜಿಲ್ಲೆಯ ಪೊಲೀಸ್, ತಾಲೂಕು ಪೊಲೀಸ್, ತುಮಕೂರು ಪೊಲೀಸ್ ಯಾವುದೇ ಪೊಲೀಸರೂ ಈ ಮೂರು ಕುಟುಂಬದವರನ್ನು ತನಿಖೆ ಮಾಡದೆಯೇ 6 ಲಕ್ಷ ರೂ ಎಂಬ ಘೋಷಣೆ ಮಾಡಿದ್ದಾರೆ. ಪೊಲೀಸ್ ಹಾಗೂ ಆ ದರೋಡೆಗೊರರ ಮೇಲೆ ಒಳಒಪ್ಪಂದ ಆಗಿದೆ ಎನ್ನುವಂತಹದ್ದು ಮೇಲ್ನೋಟಕ್ಕೆ ಗಂಭೀರತೆಯಿಂದ ಘೋಚರ ಆಗುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಯಾರೂ ಈ ದಂದೆಕೊರರಿದ್ದಾರೆ, ಇದಕ್ಕೆ ಸಹಕರಿಸುವಂತಹ ವ್ಯಕ್ತಿಗಳಿದ್ದಾರೆ ಇವರಿಗೆ ಸೂಕ್ತವಾದಂತಹ ಕಠಿಣ ಶಿಕ್ಷೆಯನ್ನು ನೀಡಬೇಕು.
ಈ ಕುಟುಂಬದ ಜೊತೆ ಸಹಕರಿಸಿದಂತಹ ಬಹಳಷ್ಟು ರಾಜಕೀಯ ನಾಯಕರಿದ್ದಾರೆ ಅದರಲ್ಲಿ ವಿಶೇಷವಾಗಿ ರಕ್ಷಿತ್ ಶಿವರಾಂ ಅವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಈ ಘಟಣೆಗೆ ಸಂಬಂಧ ಪಟ್ಟು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿಗಳಾದ ನಿಸರ್ ಕುದ್ರಡ್ಕ, ಸಾಧಿಕ್ ಲಾಯಿಲ, ಕೋಶಾಧಿಕಾರಿ ಅಶ್ರಫ್ ಕಟ್ಟೆ ಉಪಸ್ಥಿತರಿದ್ದರು.