32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮಾಸ್ತಿಕಲ್ಲು ಮಜಲು ಶ್ರೀ ಪಿಲಿಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವ: ದೈವದ ಪಾತ್ರಿ ಸೇವೆಯಿಂದ ನಿವೃತ್ತಿ ಹೊಂದಿದ್ದ ಪೂವಾಜೆ ರುಕ್ಮಯ್ಯ ಗೌಡರಿಗೆ ಸನ್ಮಾನ

ಕೊಕ್ಕಡ : ಇಲ್ಲಿಯ ಮಾಸ್ತಿಕಲ್ಲು ಮಜಲು ಶ್ರೀ ಪಿಲಿಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವವು ಮಾ.25 ರಂದು ಜರುಗಿತು.

ಮಾ.24 ರಂದು ರಾತ್ರಿ ಶ್ರೀ ಗ್ರಾಮ ದೈವಗಳ ಭಂಡಾರ ತೆಗೆದು ನಂತರ ಮಾ.25ರಂದು ಬೆಳಿಗ್ಗೆ ನೇಮೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮಾಸ್ತಿಕಲ್ಲು ಮಜಲು ಕೊಕ್ಕಡ ಇಲ್ಲಿ ವರ್ಷಂಪ್ರತಿ ನಡೆಯುವ ನೇಮೋತ್ಸವದಲ್ಲಿ ದೈವದ ಪಾತ್ರಿಯಾಗಿ ಸುಮಾರು 35 ವರ್ಷಗಳಿಂದ ಅತ್ಯಂತ ನಿಷ್ಠೆಯಿಂದ ಹಾಗೂ ಶ್ರದ್ಧಾ ಭಕ್ತಿಯಿಂದ ಸೇವೆಯನ್ನು ಮಾಡುತ್ತ ಬರುತ್ತಿದ್ದು ಇದೀಗ ತನ್ನ ವಯೋಸಹಜ ಕಾರಣದಿಂದ ದೈವದ ಪಾತ್ರಿ ಸೇವೆಯಿಂದ ನಿವೃತ್ತಿ ಹೊಂದಿದ್ದ ಪೂವಾಜೆ ರುಕ್ಮಯ್ಯ ಗೌಡ ಇವರನ್ನು ನೇಮೋತ್ಸವ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಾಲ್ವಿಕೆಯರಾದ ರಘುಚಂದ್ರ ತೋಡ್ತಿಲ್ಲಾಯ ಹಿರ್ತರಗುತ್ತು, ದೇವಿಪ್ರಸಾದ್ ಶಬರಾಯ ಅಡೈ ಜನನ, ರಾಮಯ್ಯ ಕೊಕ್ಕಡ ಪಟ್ಟೆ, ಮಹಾಬಲ ಮರಿಕೆ ಪರಾರಿ, ಆಡಳಿತ ಮೊಕ್ತೇಸರರು ಪುರುಷೋತ್ತಮ ಪೊಡಿಕೆತ್ತೂರು, ಗೌರವಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಅಧ್ಯಕ್ಷ ಕುಶಾಲಪ್ಪ ಗೌಡ ಪೊಡಿಕೆತ್ತೂರು, ಕಾರ್ಯದರ್ಶಿ ಹರೀಶ್ ಎಳ್ಳುಗದ್ದೆ ಹಾಗೂ ಶ್ರೀ ಪಿಲಿಚಾಮುಂಡಿ ಹಾಗೂ ಸಹಪರಿವಾರ ದೈವಗಳ ಸೇವಾ ಟ್ರಸ್ಟಿಗಳು ಹಾಗೂ ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ: ಬೋಳಿಯರ್ ನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಗುದ್ದಿದ್ದ ಕಾಡಾನೆ: ಸ್ಕೂಟರ್ ಗೆ ಹಾನಿ

Suddi Udaya

ರೆಖ್ಯ : ಮರದ ಕೊಂಬೆ ಮುರಿದು ಬಿದ್ದು ಮನೆಯ ಛಾವಣಿಗೆ ಹಾನಿ: ಶಿರಾಡಿ ಗ್ರಾಮ ವಿಕಾಸ ತಂಡ ಹಾಗೂ ಕೊಕ್ಕಡ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ದುರಸ್ತಿ ಕಾರ್ಯ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಮೊಟಾರ್ ರಿವೈಂಡಿಂಗ್ ಮತ್ತು ಮೆನ್ಸ್ ಪಾರ್ಲರ್ ಮೆನೇಜ್‌ಮೆಂಟ್ ತರಬೇತಿಗಳ ಸಮಾರೋಪ ಸಮಾರಂಭ

Suddi Udaya

ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮಾನ್ ಜಯಂತಿ ಆಚರಣೆ

Suddi Udaya

ಕಬಡ್ಡಿ ಪಂದ್ಯಾಟ: ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ತಂಡವು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಸುಲ್ಕೇರಿ ಗ್ರಾ.ಪಂ. ನಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ

Suddi Udaya
error: Content is protected !!