37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪದ್ಮುಂಜ: ರವಿಚಂದ್ರ ಶೆಟ್ಟಿರವರ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ

ಪದ್ಮುಂಜ ಸಮೀಪದ ಅಂತರದಲ್ಲಿ ರವಿಚಂದ್ರ ಶೆಟ್ಟಿ ಅಂತರ ನೂತನವಾಗಿ ನಿರ್ಮಿಸಿದ ಗೃಹ ಪ್ರವೇಶದ ಕಾರ್ಯಕ್ರಮದ ಪ್ರಯುಕ್ತ ಮಾ.25 ರಂದು ಸಂಜೆ ಇಪ್ತಾರ್ ಕೂಟ ನಡೆಯಿತು.

ಗ್ರಾಮದ ಮುಸ್ಲಿಂ ಬಾಂಧವರು ಅವರ ಆಥಿತ್ಯ ವನ್ನು ಸ್ವೀಕರಿಸಿದರು. ಇಪ್ತಾರ್ ಸಂಗಮದಲ್ಲಿ ಪದ್ಮುಂಜ ಜಮಾಅತ್ತ್ ಅಧ್ಯಕ್ಷ ರಫೀಖ್ ಅಂತರ, ಪ್ರ.ಕಾರ್ಯದರ್ಶಿ ಖಾಸಿಂ ಪದ್ಮುಂಜ, ಎಸ್.ವೈ.ಎಸ್ ಅಧ್ಯಕ್ಷ ನಝೀರ್ ಮಲೆಂಗಲ್ಲು, ಎಸ್.ಎಸ್.ಎಫ್ ಅಧ್ಯಕ್ಷ ನವಾಝ್ ಅಂತರ, ಖಲಂದರ್ ಪದ್ಮುಂಜ , ಫಾರೂಖ್ ಸಅದಿ ಪದ್ಮುಂಜ ಸಹಿತ ವಿವಿಧ ಸಂಘಟನೆಯ ನಾಯಕರು ಭಾಗವಹಿಸಿದರು.

ಖಾಸಿಂ ಪದ್ಮುಂಜ ಪ್ರಸ್ತಾವಿಕ ಮಾತುಗಳನ್ನಾಡಿ ಇದು ಸೌಹಾರ್ದತೆಯ ಭಾಂದವ್ಯ ಹೆಚ್ಚಿಸುವ ವಿಶೇಷ ಕಾರ್ಯಕ್ರಮ ಇದು ಇತರರಿಗೂ ಮಾದರಿಯಾಗಲಿ ಎಂದು ಹಾರೈಸಿ ರವಿಚಂದ್ರ ಹಾಗೂ ಅವರ ಫ್ಯಾಮಿಲಿಗೆ ಧನ್ಯವಾದ ಹೇಳಿದರು. ಸಭೆಯಲ್ಲಿ ಉದಯ ಮೇಲಂಟ, ರಮನಾತ ಶೆಟ್ಟಿ, ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

Related posts

ಹೊಸಂಗಡಿ ಇಂದಿರಾ ವಸತಿ ಶಾಲೆಯಲ್ಲಿ ವನಮಹೋತ್ಸವ

Suddi Udaya

ಸೋಣಂದೂರು: ಕೊಲ್ಪದಬೈಲು ಸಮೀಪ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಹಾನಿ: ಮೆಸ್ಕಾಂ ಇಲಾಖೆಯಿಂದ ತೆರವು ಕಾರ್ಯ

Suddi Udaya

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರಾರ್ಥನಾರಿಗೆ ಸನ್ಮಾನ

Suddi Udaya

ತಾಲೂಕಿನ ನಾಲ್ಕು ಮಂದಿ ಯಕ್ಷಗಾನ ಸಾಧಕರಿಗೆ ಪ್ರಶಸ್ತಿ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಬಂಡೆ ಕಲ್ಲಿಗೆ ಲಾರಿ ಡಿಕ್ಕಿ: ಚಾಲಕ ಪ್ರಾಣಾಪಾಯದಿಂದ ಪಾರು

Suddi Udaya

ಕೊಯ್ಯೂರು: ಹರ್ಪಳದಲ್ಲಿ ಅಡ್ಡಲಾಗಿ ಬಿದ್ದ ಮರಗಳ ತೆರವು ಕಾರ್ಯ

Suddi Udaya
error: Content is protected !!