23.3 C
ಪುತ್ತೂರು, ಬೆಳ್ತಂಗಡಿ
May 18, 2025
ವರದಿ

ಮೊಗ್ರು: ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ -ಮುಗೇರಡ್ಕ ಬೆಳ್ಳಿಹಬ್ಬದ ಆಚರಣೆಯ ಸಮಾಲೋಚನ ಸಭೆ

ಮೊಗ್ರು : ಮೊಗ್ರು ಗ್ರಾಮದ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಅಲೆಕ್ಕಿ -ಮುಗೇರಡ್ಕ ಇದರ 25 ನೇ ವರ್ಷದ ಪ್ರಯುಕ್ತ ಬೆಳ್ಳಿಹಬ್ಬದ ಆಚರಣೆಯ ಬಗ್ಗೆ ಸಮಾಲೋಚನ ಸಭೆ ಅಲೆಕ್ಕಿ ಶಿಶುಮಂದಿರದಲ್ಲಿ ನಡೆಯಿತು.


ಸಭೆಯಲ್ಲಿ ಬೆಳ್ಳಿಹಬ್ಬ ಆಚರಣೆಯನ್ನು ಫೆಬ್ರವರಿ 15,16,17 ನೇ 2025ರಂದು 3 ದಿನ ನಡೆಸುವುದೆಂದು ತೀರ್ಮಾನಿಸಲಾಯಿತು, ಮತ್ತು ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಬೆಳ್ಳಿ ಹಬ್ಬದ ಆಚರಣಾ ಸಮಿತಿ ರಚನೆ ಮಾಡಲಾಯಿತು. ಸಂಚಾಲಕರಾಗಿ ಬಾಲಕೃಷ್ಣ ಗೌಡ ಮುಗೇರಡ್ಕ, ಅಧ್ಯಕ್ಷರಾಗಿ ಭರತೇಶ್ ಪುನ್ಕೆದಡಿ, ಉಪಾಧ್ಯಕ್ಷರಾಗಿ ಪ್ರವೀಣ್ ಗೌಡ ಮತ್ತಿಲಾರು, ಬಾಲಕೃಷ್ಣ ಗೌಡ ಅಲೆಕ್ಕಿ, ಕಾಂತಪ್ಪ ಗೌಡ ಅಲೆಕ್ಕಿ, ಕಾರ್ಯದರ್ಶಿಯಾಗಿ ದೀಕ್ಷಿತ್ ಗೌಡ ಎರ್ಮಲ, ಜೊತೆ ಕಾರ್ಯದರ್ಶಿಯಾಗಿ ನಿತಿನ್ ಮುಂಡಾಜೆ, ಬಾಲಕೃಷ್ಣ ಗೌಡ ಬರುಂಗುಡೆಲ್ , ಕೋಶಾಧಿಕಾರಿಯಾಗಿ ಜಗದೀಶ್ ಗೌಡ ಅರ್ಬಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ ನ ಗೌರವಾಧ್ಯಕ್ಷರಾದ ಉದಯ ಭಟ್ ಅಲೆಕ್ಕಿ, ಅಧ್ಯಕ್ಷರಾದ ರಮೇಶ್ ಎನ್ ನೆಕ್ಕರಾಜೆ, ಉಪಾಧ್ಯಕ್ಷರಾದ ಸುದರ್ಶನ್ ಗೌಡ ಅಲೆಕ್ಕಿ, ಕೇಶವ ಮತ್ತಿಲಾರು, ಕಾರ್ಯದರ್ಶಿಯಾದ ನೇಮಿಚಂದ್ರ ಮುಗೇರಡ್ಕ, ಜೊತೆ ಕಾರ್ಯದರ್ಶಿಗಳಾದ ವರುಣ್ ನೆಕ್ಕರಾಜೆ, ಮಹೇಶ್ ಅರ್ಬಿ, ಕೋಶಾಧಿಕಾರಿಯಾದ ಸುಧಾಕರ ಪುನ್ಕೆದಡಿ, ಸಂಚಾಲಕರಾದ ಅಶೋಕ್ ಬರುoಗುಡೆಲು, ನಾಗೇಶ್ ಉಪ್ಪ ಹಾಗೂ ಕ್ಲಬ್ ನ ಸರ್ವಸದಸ್ಯರು ಉಪಸ್ಥಿತರಿದ್ದರು.
ನೇಮಿಚಂದ್ರ ಸ್ವಾಗತಿಸಿದರು, ಅಶೋಕ್ ಗೌಡ ವಂದನಾರ್ಪಣೆ ಸಲ್ಲಿಸಿದರು.

Related posts

ದಯಾ ವಿಶೇಷ ಶಾಲೆಯಲ್ಲಿ ಕೀರ್ತಿಶೇಷ ಕೆ. ವಸಂತ ಬಂಗೇರರ ಹುಟ್ಟುಹಬ್ಬ ಆಚರಣೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವ ಗುಣಮಟ್ಟದ ಮಾನದಂಡ ಮಾನ್ಯತಾ ಪ್ರಮಾಣಪತ್ರ

Suddi Udaya

ಮರೋಡಿ: ಹಲ್ಲೆ, ಜೀವ ಬೆದರಿಕೆ ಆರೋಪ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಶಿಬರಾಜೆಪಾದೆ: ಶ್ರೀಕೃಷ್ಣ ಜನ್ಮಾಷ್ಠಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗುರುವಾಯನಕೆರೆ: ವಿದ್ವತ್ ಕ್ಲಾಸ್ ಕನೆಕ್ಟ್ ಉದ್ಘಾಟನೆ ಹಾಗೂ ಓರಿಯೆಂಟೇಷನ್ ಕಾರ್ಯಕ್ರಮ

Suddi Udaya

ಕಾನರ್ಪ ಪುರುಷರ ಬಳಗದ ಪುರುಷರ ರಾಶಿ ಪೂಜೆ

Suddi Udaya
error: Content is protected !!