24.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪದ್ಮುಂಜ: ರವಿಚಂದ್ರ ಶೆಟ್ಟಿರವರ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ

ಪದ್ಮುಂಜ ಸಮೀಪದ ಅಂತರದಲ್ಲಿ ರವಿಚಂದ್ರ ಶೆಟ್ಟಿ ಅಂತರ ನೂತನವಾಗಿ ನಿರ್ಮಿಸಿದ ಗೃಹ ಪ್ರವೇಶದ ಕಾರ್ಯಕ್ರಮದ ಪ್ರಯುಕ್ತ ಮಾ.25 ರಂದು ಸಂಜೆ ಇಪ್ತಾರ್ ಕೂಟ ನಡೆಯಿತು.

ಗ್ರಾಮದ ಮುಸ್ಲಿಂ ಬಾಂಧವರು ಅವರ ಆಥಿತ್ಯ ವನ್ನು ಸ್ವೀಕರಿಸಿದರು. ಇಪ್ತಾರ್ ಸಂಗಮದಲ್ಲಿ ಪದ್ಮುಂಜ ಜಮಾಅತ್ತ್ ಅಧ್ಯಕ್ಷ ರಫೀಖ್ ಅಂತರ, ಪ್ರ.ಕಾರ್ಯದರ್ಶಿ ಖಾಸಿಂ ಪದ್ಮುಂಜ, ಎಸ್.ವೈ.ಎಸ್ ಅಧ್ಯಕ್ಷ ನಝೀರ್ ಮಲೆಂಗಲ್ಲು, ಎಸ್.ಎಸ್.ಎಫ್ ಅಧ್ಯಕ್ಷ ನವಾಝ್ ಅಂತರ, ಖಲಂದರ್ ಪದ್ಮುಂಜ , ಫಾರೂಖ್ ಸಅದಿ ಪದ್ಮುಂಜ ಸಹಿತ ವಿವಿಧ ಸಂಘಟನೆಯ ನಾಯಕರು ಭಾಗವಹಿಸಿದರು.

ಖಾಸಿಂ ಪದ್ಮುಂಜ ಪ್ರಸ್ತಾವಿಕ ಮಾತುಗಳನ್ನಾಡಿ ಇದು ಸೌಹಾರ್ದತೆಯ ಭಾಂದವ್ಯ ಹೆಚ್ಚಿಸುವ ವಿಶೇಷ ಕಾರ್ಯಕ್ರಮ ಇದು ಇತರರಿಗೂ ಮಾದರಿಯಾಗಲಿ ಎಂದು ಹಾರೈಸಿ ರವಿಚಂದ್ರ ಹಾಗೂ ಅವರ ಫ್ಯಾಮಿಲಿಗೆ ಧನ್ಯವಾದ ಹೇಳಿದರು. ಸಭೆಯಲ್ಲಿ ಉದಯ ಮೇಲಂಟ, ರಮನಾತ ಶೆಟ್ಟಿ, ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

Related posts

ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆಯ ಆಮಂತ್ರಣ ಪತ್ರ ಬಿಡುಗಡೆ

Suddi Udaya

ಉಜಿರೆ ಹಾ.ಉ.ಸ. ಸಂಘದ ವತಿಯಿಂದ ಬದನಾಜೆ ಶಾಲೆಯ ನೂತನ ಸಭಾಂಗಣಕ್ಕೆ ದೇಣಿಗೆ ಹಸ್ತಾಂತರ

Suddi Udaya

ಉಜಿರೆ: ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಪೋಷಕರ ಜಾಗೃತಿ ಕಾರ್ಯಕ್ರಮ

Suddi Udaya

ಗುರುವಾಯನಕೆರೆ: ಖಾಸಗಿ ಬಸ್ಸು ಡಿಕ್ಕಿ ಹೊಡೆದು ಪಾದಚಾರಿ ಸಾವು

Suddi Udaya

ರೇಷ್ಮೆರೋಡ್: ಬೃಹತ್ ಗಾತ್ರದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

Suddi Udaya

ಬೆಳ್ತಂಗಡಿ ರಾಜಕೇಸರಿ ಟ್ರಸ್ಟ್ ಸಂಸ್ಥಾಪಕ ದೀಪಕ್ ಜಿ ರವರಿಗೆ ಸ್ಪೂರ್ತಿ ಕುಮಾರ ಸೇವಾ ರತ್ನ ಪ್ರಶಸ್ತಿ

Suddi Udaya
error: Content is protected !!