ಪಟ್ರಮೆ :ಇಲ್ಲಿಯ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ನರ್ಸರಿ ವಿಭಾಗದಿಂದ ಹಳದಿ ದಿನ ಆಚರಿಸಲಾಯಿತು.
ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಹಳದಿ ಬಣ್ಣದ ಮಹತ್ವ, ಬಳಕೆ ಮತ್ತು ಉಪಯೋಗದ ಬಗ್ಗೆ ಪ್ರಾಯೋಗಿಕ ಜ್ಞಾನ ನೀಡುವುದಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಈ ರೀತಿಯ ಪ್ರಾಯೋಗಿಕವಾಗಿ ಕಾರ್ಯಕ್ರಮಗಳನ್ನು ಮಾಡಿದಾಗ ಬೇಗನೆ ಕಲಿತುಕೊಳ್ಳುತ್ತಾರೆ. ಕೇವಲ ಓದುವುದು ಬರೆಯುವುದು ಮಾತ್ರವಲ್ಲದೆ ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗುತ್ತದೆ ಎಂದರು.
ಶಾಲಾ ಆಂಗ್ಲ ಭಾಷಾ ದಿಲೀಪ್ ವಿದ್ಯಾರ್ಥಿಗಳಿಗೆ ಹಳದಿ ಬಣ್ಣದ ಮಹತ್ವವನ್ನು ತಿಳಿಸುವುದರೊಂದಿಗೆ, ಪ್ರಾಮುಖ್ಯತೆ, ಹಾಗೂ ಪ್ರಯೋಜನವನ್ನು ತಿಳಿಸಿದರು. ನರ್ಸರಿ ವಿಭಾಗದ ಮೇಲ್ವಿಚಾರಕಿ ಸ್ವಾತಿ ಕೆ. ವಿ, ಶಿಕ್ಷಕಿ ವನಿತಾ ಸಹ ಶಿಕ್ಷಕರಾದ ಸುಪ್ರೀತಾ ಎ, ಶ್ವೇತ ಕುಮಾರಿ ಎಂ ಪಿ, ಶುಭಲಕ್ಷ್ಮಿ, ರೇಶ್ಮಾ, ಕಲ್ಪನಾ ಚಿಪಳೂಣ್ಕರ್, ಭವ್ಯ ಪಿ.ಡಿ, ಕುಸುಮಾವತಿ ಸಹಕರಿಸಿದರು.