ಬೆಳ್ತಂಗಡಿ: ಸಂತ ಲಾರೆನ್ಸ್ ರ ಮಹಾದೇವಲಯದಲ್ಲಿ ಧರ್ಮಾಧ್ಯಕ್ಷರಾದ ಅತಿವಂದನೀಯ ಲಾರೆನ್ಸ್ ಮುಕ್ಕುಯವರು 12 ಮಂದಿ ವಿಶ್ವಾಸಿಗಳ ಪಾದಗಳನ್ನು ತೊಳೆಯುವುದರ ಮೂಲಕ ಯೇಸುವಿನ ಪ್ರೀತಿಯ ಸ್ಮರಣೆಯ ಅನುಷ್ಠಾನವಾದ ಪಾಸ್ಕ ಹಬ್ಬದ ಆಚರಣೆ ನಡೆಯಿತು. ಹಬ್ಬದ ಆಚರಣೆಯಲ್ಲಿ ಮಹಾದೇವಾಲಯದ ವಿಕಾರ್ ಫಾದರ್ ಥಾಮಸ್, ಫಾದರ್ ಕುರಿಯಾಕೋಸ್, ಫಾದರ್ ಟಾಮಿ, ಹೆಚ್ಚಿನ ಸಂಖ್ಯೆಯಲ್ಲಿ ಧರ್ಮ ಭಗಿನಿಯರು ಹಾಗೂ ವಿಶ್ವಾಸಿಗಳು ಪಾಲ್ಗೊಂಡರು.
ಕ್ರಿಸ್ತ ಯೇಸುವಿನ ಶಿಲುಬೆಯ ಮರಣದ ಮೊದಲು ಶಿಷ್ಯರಿಗೆ ಪ್ರೀತಿಯ, ಸೇವೆಯ, ಸಹಬಾಳ್ವೆಯ, ಅನ್ಯೂನತೆಯ ಹೊಸ ಪಾಠವನ್ನು ಕಲಿಸಿದ ದಿನವೇ ಪಾಸ್ತಾ ಗುರುವಾರ. ಯೇಸುಕ್ರಿಸ್ತರು ಶಿಲುಬೆಯಲ್ಲಿ ಮನುಕುಲಕ್ಕೆ ತೋರಿಸಿದ ಕರುಣೆಯ, ಕ್ಷಮೆಯ, ಪ್ರೀತಿಯ ಅನುಷ್ಠಾನವೇ ದಿವ್ಯ ಬಲಿ ಪೂಜೆ ಎಂದು ಕ್ರೈಸ್ತರು ಅನುಸ್ಮರಿಸುವ ಕ್ರೈಸ್ತರ ಪೂಜಾರ್ಪಣೆ.
ತನ್ನ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ ಕ್ರಿಸ್ತರ ಶಿಷ್ಯರಾದ ಎಲ್ಲರೂ ಪರಸ್ಪರ ಸೇವೆಯ ಪ್ರೀತಿಯ ಮನೋಭಾವವನ್ನು ಬೆಳೆಸಿರಬೇಕೆಂದು ಮನುಕುಲಕ್ಕೆ ಕಲಿಸಿದರು. ಇದನ್ನು ಸ್ಮರಿಸಿ ಒಂದೇ ಪಾತ್ರೆಯಿಂದ ಕುಡಿದು ಒಂದೇ ರೊಟ್ಟಿಯನ್ನು ಬುಜಿಸುವ ನಾವೆಲ್ಲರೂ ಒಂದಾಗಿರಬೇಕೆಂದು ಬಿಷಪ್ ಸ್ವಾಮಿಯವರು ಜನರನ್ನು ಆಹ್ವಾನಿಸಿದರು.
ನಾಳೆ ಗುಡ್ ಫ್ರೈಡೆ, ಕ್ರಿಸ್ತರ ಶಿಲುಬೆಯ ಮರಣವನ್ನು ಪ್ರತ್ಯೇಕವಾಗಿ ಅನುಸ್ಮರಿಸಲಾಗುವುದು. ಪಾಸ್ಕ ಹಬ್ಬದಂದು ಕ್ರಿಸ್ತರು ಕಲಿಸಿದ ಪ್ರೀತಿಯ ಪಾಠವನ್ನು ಶಿಲುಬೆಯಲ್ಲಿ ನಮ್ಮನ್ನು ಪ್ರಿಯಪಡಿಸುವುದು ಕ್ರಿಸ್ತ ಯೇಸುವಿನ ಶಿಲುಬೆಯ ಮರಣ. ಕ್ರಿಸ್ತರ ಈ ಪ್ರೀತಿಯ ಮನೋಭಾವ ಎಲ್ಲರಿಗೂ ಇರಲಿ ಎಂದು ಬಿಷಪ್ ಸ್ವಾಮಿಯವರು ಕರೆಕೊಟ್ಟರು.