ಬೆಳ್ತಂಗಡಿ : ಇಂದು ಎಲ್ಲಾ ಕ್ರೈಸ್ ದೇವಾಲಯಗಳಲ್ಲಿ ಯೇಸು ಕ್ರಿಸ್ತರು ಶಿಲುಬೆ ಮರಣವನ್ನು ಸ್ಮರಿಸಿ ಪ್ರತ್ಯೇಕ ಪ್ರಾರ್ಥನೆಗಳು ಹಾಗೂ ಶಿಲುಬೆ ಹಾದಿ ನಡೆಸಲಾಯಿತು.
ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸಂತ ಲಾರೆನ್ಸರ ಮಹಾದೇವಲಯದಲ್ಲಿ ಧರ್ಮಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿಯವರ ಕಾರ್ಮಿಕತ್ವದಲ್ಲಿ ಪ್ರಾರ್ಥನೆಗಳು ಜರಗಿತು. ಏಸುಕ್ರಿಸ್ತನ ಶಿಲುಬೆಯ ಮರಣವನ್ನು ಅನುಸ್ಮರಿಸಿ ತಮ್ಮ ಪಾಪಗಳ ಕುರಿತು ಪಶ್ಚಾತಾಪಟ್ಟು ಜನರು ತಮ್ಮ ಪಾಪ ಪರಿಹಾರಾರ್ಥವಾಗಿ ಶಿಲುಬೆಯ ಹಾದಿಯನ್ನು ನಡೆಸಿದರು. ಶಿಲುಬೆಯಲ್ಲಿ ಶತ್ರುಗಳಿಗಾಗಿ ಪ್ರಾರ್ಥಿಸಿ ತನ್ನನ್ನು ದ್ರೋಹಿಸಿದವರನ್ನು ಕ್ಷಮಿಸಿದ ಏಸುಕ್ರಿಸ್ತರು ನಮಗೆಲ್ಲರಿಗೂ ಮಾದರಿಯಾಗಲಿ ಎಂದು ಧರ್ಮದೀಕ್ಷನಾದ ಮುಕ್ಕುಯವರು ಕರೆಕೊಟ್ಟರು.
ಶಿಲುಬೆಯ ಗುರುತು ಕ್ಷಮೆಯ, ಕರುಣೆಯ, ಪ್ರೀತಿಯ ಗುರುತು. ಈ ಶಿಲುಬೆ ಸಹೋದರರನ್ನು ಪ್ರೀತಿಸಲು, ಕ್ಷಮೆ ಕೊಡಲು ಎಲ್ಲರಿಗೂ ಶಕ್ತಿ ನೀಡಲಿ ಎಂದು ಧರ್ಮ ಅಧ್ಯಕ್ಷರು ಎಲ್ಲರನ್ನೂ ಆಶೀರ್ವದಿಸಿದರು.