ಮೇಲಂತಬೆಟ್ಟು ನಿವಾಸಿ ಸುನಂದ (58) ಎಂಬವರು ಮಾ.25 ರಂದು ಬೆಳಿಗ್ಗೆ ತನ್ನ ಸುಮಾರು 3 ವರ್ಷ ಪ್ರಾಯದ ಹಸುವನ್ನು ಮೇಯಲು ಬಿಟ್ಟಿದ್ದು, ಸದ್ರಿ ಹಸುವು ಈವರೆಗೆ ಹಿಂತಿರುಗಿ ಬರಲಿಲ್ಲ.
ಹಸುವನ್ನು ಸುತ್ತಮುತ್ತ ಪರಿಸರದಲ್ಲಿ ಹುಡುಕಿದರೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ರೂ 10,000/-ಮೌಲ್ಯದ ಸದ್ರಿ ಹಸುವನ್ನು ಯಾರೋ ಕಳವು ಮಾಡಿರುವ ಸಾಧ್ಯತೆ ಇರುವುದಾಗಿ, ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 42/2024 ಕಲಂ: 379 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.