April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಪಘಾತದಲ್ಲಿ ಮೃತರಾದ ಪ್ರೈಸ್ ಮ್ಯಾಥ್ಯೂ ರವರಿಗೆ ಬೆಳ್ತಂಗಡಿಯಲ್ಲಿ ಅಂತಿಮ ನಮನ: ಅಂತ್ಯಸಂಸ್ಕಾರಕ್ಕಾಗಿ ಕೇರಳದ ಇರಟ್ಟಿಗೆ ಪಾರ್ಥಿವ ಶರೀರ ರವಾನೆ

ಬೆಳ್ತಂಗಡಿ: ಮಾ.29 ರಂದು ಶುಕ್ರವಾರ ಗುರುವಾಯನಕೆರೆ ಶಕ್ತಿ ನಗರದಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟ ಪ್ರೈಸ್ ಮ್ಯಾಥ್ಯೂ ಅವರ ಅಂತಿಮ ದರ್ಶನ ಬೆಳ್ತಂಗಡಿ ಕೆಥಡ್ರಲ್ ಮಹಾ ದೇವಾಲಯದಲ್ಲಿ ನಡೆಯಿತು.

ಈ ವೇಳೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರ ನೇತೃತ್ವದಲ್ಲಿ ಧರ್ಮಗುರುಗಳ ಬಳಗ ಅಂತಿಮ ಪ್ರಾರ್ಥನಾ ವಿಧಿ ನಡೆಸಿಕೊಟ್ಟರು.
ಬೆಳ್ತಂಗಡಿ ಸದರ್ನ್ ರಬ್ಬರ್ಸ್ ಇದರ ಮಾಲಕ ವಿ.ವಿ.ಮ್ಯಾಥ್ಯೂ ಅವರ ಪುತ್ರರಾಗಿರುವ ಪ್ರೈಸ್ ಮ್ಯಾಥ್ಯೂ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕವಾಗಿ ಕಾರು ನಿಯಂತ್ರಣ ಕಳೆದುಕೊಂಡು ಧರೆಗೆ ಡಿಕ್ಕಿಯಾಗಿ ದಾರುಣವಾಗಿ ಅವರು ಕೊನೆಯುಸಿರೆಳೆದಿದ್ದರು. ಅಪಘಾತದ ಸಂದರ್ಭ ಅವರ ಜೊತೆಗಿದ್ದ ಧರ್ಮಸ್ಥಳದ ಅರುಣ್ ಜೆ ಮತ್ತು ನಿತಿನ್ ಅವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರೈಸ್ ಮ್ಯಾಥ್ಯೂ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೊಳಪಡಿಸಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಹಿಸುವ ದಾರಿ ಮಧ್ಯೆ ಅವರು ಅಸುನೀಗಿದ್ದರು.

ಅವರ ಪಾರ್ಥಿವ ಶರೀರವನ್ನು ಮಹಾದೇವಾಲಯಕ್ಕೆ ತಂದ ವೇಳೆ ಅವರ ಬಂಧುಗಳು ಹಾಗೂ ಮಿತ್ರರು ಅಪಾರ ಪ್ರಮಾಣದಲ್ಲಿ ನೆರೆದಿದ್ದರು.

ಅವರ ಅಂತಿಮ ವಿಧಿ ಹಾಗೂ ಸಂಸ್ಕಾರ ಕಾರ್ಯ ಕೇರಳದ ಇರಟ್ಟಿಯಲ್ಲಿ ನಡೆಯಲಿರುವುದರಿಂದ ಅವರ ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಲಾಯಿತು.

Related posts

ಚಿತ್ಪಾವನ ಬ್ರಾಹ್ಮಣರ ಬಳಗ ಉಜಿರೆ-ಬೆಳ್ತಂಗಡಿ ಇದರ 13ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಕಳೆಂಜ ನಂದಗೋಕುಲ ಗೋಶಾಲೆಗೆ ರೂ.10 ಸಾವಿರ ದೇಣಿಗೆ

Suddi Udaya

ಉಜಿರೆ : ಅನುಗ್ರಹ ಕಾಲೇಜಿನಲ್ಲಿ ಸಾಹಿತ್ಯ ಹಾಗೂ ವ್ಯಕ್ತಿತ್ವ ವಿಕಸನ

Suddi Udaya

ಆ.1: ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ತಾಲೂಕಿನ 5000 ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya

ಓಡಿಲ್ನಾಳ ಬಂಟರ ಸಂಘದ ಸಮಾಲೋಚನೆ ಸಭೆ ಹಾಗೂ ಗ್ರಾಮ ಸಮಿತಿ ರಚನೆ

Suddi Udaya

ವೇಣೂರು: ಉಳ್ತೂರು ನೂರುಲ್ ಹುದಾ ದರ್ಸ್ ವಿದ್ಯಾರ್ಥಿ ಸಾಹಿತ್ಯ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಜ.27,30: ಕೊಕ್ಕಡ ಮಾಯಿಲಕೋಟೆ ಸೀಮೆ ಕ್ಷೇತ್ರದಲ್ಲಿ ನಾಗಪ್ರತಿಷ್ಠೆ ಮತ್ತು ವಾರ್ಷಿಕ ನೇಮೋತ್ಸವ

Suddi Udaya
error: Content is protected !!