April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಭೂಸೇನೆಯಲ್ಲಿ 20ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಾರ್ಯ ಪಿಲಿಗೂಡು ನಿವಾಸಿ ಹವಾಲ್ದಾರ್ ಜಯಾನಂದ ಪೂಜಾರಿ ಮಾ.31 ರಂದು ಸೇವಾ ನಿವೃತ್ತಿ

ಬೆಳ್ತಂಗಡಿ: ಭಾರತೀಯ ಭೂಸೇನೆಯಲ್ಲಿ ಕಳೆದ 20ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಾರ್ಯ ಗ್ರಾಮದ ಪಿಲಿಗೂಡು ನಿವಾಸಿ ಹವಾಲ್ದಾರ್ ಜಯಾನಂದ ಪೂಜಾರಿ ಅವರು ಮಾ.31ರಂದು ನಿವೃತ್ತಿಯಾಗಲಿದ್ದಾರೆ

ಜಯಾನಂದ ಪೂಜಾರಿಯವರು 2004ರಿಂದ 2006ರ ತನಕ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭೂಸೇನೆಯ ಟ್ರೈನಿಂಗ್ ಪಡೆದುಕೊಂಡಿದ್ದಾರೆ. ಬಳಿಕ 3 ವರ್ಷ ಉತ್ತರ ಪ್ರದೇಶದ ಮೀರತ್, 3 ವರ್ಷ 23ರಾಷ್ಟ್ರೀಯ ರೈಫಲ್, 3 ವರ್ಷ ಬೆಂಗಳೂರು, 3 ವರ್ಷ ಉತ್ತರ ಪ್ರದೇಶದ ಆಗ್ರಾ, 2 ವರ್ಷ ಜಮ್ಮು ಕಾಶ್ಮೀರದ ಲೇಹ್ ಲಕ್ ಹಾಗೂ ಪ್ರಸ್ತುತ ಬೆಂಗಳೂರಿನ 515 ಆರ್ಮಿ ಬೇಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ 20ವರ್ಷಗಳ ಸೇವಾ ಅವಧಿಯಲ್ಲಿ ಹಲವು ಪದಕಗಳನ್ನೂ ಪಡೆದುಕೊಂಡಿದ್ದಾರೆ. 9 ವರ್ಷಗಳ ಸುದೀರ್ಘ ಸೇವಾ ಪದಕ, ವಿಶೇಷ ಸೇವಾ ಪದಕ(ಆಪರೇಷನ್ ರಹಿನೋ), ಪಶ್ಚಿಮಬಂಗಾಳ, ಅಸ್ಸಾಂ, ಜಮ್ಮು ಕಾಶ್ಮೀರದಲ್ಲಿನ ಸೇವೆಯ ವೇಳೆ ಸೈನ್ಯ ಸೇವಾ ಪದಕ, 75ನೇ ಇಂಡಿಪೆಂಡೆನ್ಸ್ ವಾರ್ಷಿಕೋತ್ಸವ ಪದಕ, 20 ವರ್ಷಗಳ ಸುದೀರ್ಘ ಸೇವೆಗಾಗಿ ಪದಕ, 23 ರಾಷ್ಟ್ರೀಯ ರೈಫಲ್ ಹಾಗೂ ಅಸ್ಸಾಂನ ಗುವಾಹಟಿಯಲ್ಲಿ ಸೇವೆ ವೇಳೆ ಅತ್ಯುತ್ತಮ ಹಾರ್ಡ್ ವರ್ಕರ್ ಪ್ರಶಸ್ತಿ, ಲೇಹ್ ಲಾಕ್‌ನಲ್ಲಿ ಸೇವೆ ವೇಳೆ ಎಕ್ಸಲೆಂಟ್ ಅವಾರ್ಡ್ ಪಡೆದುಕೊಂಡಿದ್ದಾರೆ.

ಇವರು ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಪಿಲಿಗೂಡು ಪೆಲತ್ತಾಜೆ ದಿ.ಜನಾರ್ದನ ಪೂಜಾರಿ ಹಾಗೂ ಅಪ್ಪಿ ದಂಪತಿಯ ಪುತ್ರ. ಪತ್ನಿ ಪವಿತ್ರ, ಪುತ್ರಿಯರಾದ ತನ್ನಿ, ತಸ್ಸಿ,

Related posts

ಪೆರ್ಲ ಬೈಪಾಡಿ ಸ.ಪ್ರೌ. ಶಾಲೆ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ

Suddi Udaya

ಪುಂಜಾಲಕಟ್ಟೆಯಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಮತ ಯಾಚನೆ

Suddi Udaya

ಅಳದಂಗಡಿ: ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಬಡಗಕಾರಂದೂರು ಒಕ್ಕೂಟದಿಂದ ಭಜನಾ ಕಾರ್ಯಕ್ರಮ

Suddi Udaya

ಸುಲ್ಕೇರಿಮೊಗ್ರು: ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಐಡಿಎಫ್ ಡಾಡ್ಜ್ ಬಾಲ್ ಫೇಡರೇಷನ್ ಕಪ್ 2024 ಪಂದ್ಯಾಟದಲ್ಲಿ ಅಭಿಶೃತ್ ಇಳಂತಿಲ ಇವರ ನಾಯಕತ್ವದ ಕರ್ನಾಟಕ ತಂಡಕ್ಕೆ ತೃತೀಯ ಪ್ರಶಸ್ತಿ

Suddi Udaya

ಬಳಂಜ: ಉದ್ಯಮಿ ಯಶೋಧರ ಜೈನ್ ನಿಧನ

Suddi Udaya
error: Content is protected !!