ಉಜಿರೆ: ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ಉಜಿರೆಯ ಕಿಂಡರ್ ಗಾರ್ಟನ್ ವಿಭಾಗದಿಂದ ಹೊರಹೋಗುವ ವಿದ್ಯಾರ್ಥಿಗಳಿಂದ ಬುಧವಾರ ‘ಮೈ ನೆಕ್ಸ್ಟ್ ಸ್ಟೆಪ್’ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ಕಿಂಡರ್ ಗಾರ್ಟನ್ ಯುಕೆಜಿ ಎ, ಬಿ, ಸಿ ವಿಭಾಗಗಳ ಮಕ್ಕಳಿಂದ ಸಂಯುಕ್ತವಾಗಿ ನಡೆದ ಈ ವೈವಿಧ್ಯಮಯ ಕಾರ್ಯಕ್ರಮದಲ್ಲಿ “ಬ್ಲ್ಯೂ ಜಾಕಲ್” ಎಂಬ ಕಥಾ ಪ್ರಹಸನ ನಡೆಯಿತು. ಅಗಸ್ತ್ಯ ಈ ಕಾರ್ಯಕ್ರಮವನ್ನು ನಿರೂಪಿಸಿದರು.
ಮೈ ಸ್ಕೂಲ್, ಹಣ್ಣುಹಂಪಲುಗಳು, ಮೈ ಫ್ಯಾಮಿಲಿ, ತರಕಾರಿಗಳು, ಮೈ ಕಂಟ್ರಿ, ಪ್ರಾಣಿಗಳು ಈ ವಿಷಯಗಳ ಬಗ್ಗೆ ಫಾರಿಶ್, ಸಾನಿಧ್ಯ, ಧೀಮನ್ ಜೈನ್, ಮನಸ್ವಿನಿ, ಧನ್ವಿತ್, ಸಂಚಿತಾ ಮಾತನಾಡಿದರು.
ದೇಶದ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ “ಚಪ್ಪಾಳೆ”ಎಂಬ ನೃತ್ಯ ನಾಟಕ, ಆಕ್ಷನ್ ಸೋಂಗ್, ‘ಐ ಆ್ಯಮ್ ರೆಡಿ ಟು ಗೋ’ ನೃತ್ಯವನ್ನು ಪ್ರಸ್ತುತ ಪಡಿಸಿದರು.
ಸಭಾ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಮನಮೋಹನ್ ನಾಯ್ಕ್ ಕೆ.ಜಿ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆಕ್ಯಾ ಜೈನ್, ಶಾನ್ವಿ ಪ್ರಭು, ರಿಯಾನ್ಶಿ, ಸಾನಿಧ್ಯ ರವರು ಪ್ರಾರ್ಥಿಸಿದರು.
ಕೃದಯ್ ನವೀನ್ ಸ್ವಾಗತಿಸಿ, ಸಂಚಿತಾ ವಂದಿಸಿದರು.