38.9 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳಾಲು ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕ್ರೀಡೆ ಮತ್ತು ಮನೋಲ್ಲಾಸ ಶಿಬಿರ ಆರಂಭವಾಯಿತು. ಶಿಬಿರದ ಉದ್ಘಾಟನೆಯನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ ಗೌಡ ಕೊಲ್ಲಿಮಾರ್ ರವರು ನೆರವೇರಿಸಿ ಮಾತನಾಡುತ್ತಾ, ಬೆಳಾಲು ಪ್ರೌಢಶಾಲೆಯಲ್ಲಿ ನಿರಂತರವಾಗಿ ಬೇಸಿಗೆ ಶಿಬಿರವು ಆಯೋಜನೆಗೊಳ್ಳುತ್ತಿದೆ. ಶಿಬಿರದ ಮೂಲಕ ವಿದ್ಯಾರ್ಥಿಗಳು ವಿಶೇಷ ತರಬೇತಿ ಮತ್ತು ಜ್ಞಾನವನ್ನು ಪಡೆದು, ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಚರು. ಅತಿಥಿಗಳಾಗಿ ಆಗಮಿಸಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಕನಿಕ್ಕಿಲರವರು ಶುಭಕೋರಿದರು.


ಒಂದು ವಾರದ ಶಿಬಿರದಲ್ಲಿ ರಂಗಕಲೆ, ಗಾಯನ, ಕರಕುಶಲ, ಉಜಿರೆ ಶ್ರೀ ಧ ಮ ಕಾಲೇಜು ಭೇಟಿ, ಆರೋಗ್ಯ ಮಾಹಿತಿ, ಕತೆಗಳಲ್ಲಿ ಜೀವನ ಮೌಲ್ಯ, ಬರವಣಿಗೆ ಕಲೆ ಮೊದಲಾದ ವಿಷಯಗಳಲ್ಲಿ ತರಬೇತಿ ನಡೆಯಲಿದೆ. ವಿವಿಧ ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದಾರೆ.

ಮೊದಲ ದಿನದ ಶಿಬಿರದಲ್ಲಿ ಕರಕುಶಲ ತಯಾರಿಯ ಬಗ್ಗೆ ಚಿತ್ರಕಲಾ ಶಿಕ್ಷಕರಾದ ಉಜಿರೆಯ ಶ್ರೀರಾಮ್ ಮತ್ತು ಶ್ರೀಮತಿ ಕಾದಂಬರಿ ಧರ್ಮಸ್ಥಳ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿಯನ್ನು ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಶಿಬಿರದ ಸಂಯೋಜಕರಾದ ಕೃಷ್ಣಾನಂದ, ಸುಮನ್ ಯು ಎಸ್ , ಶ್ರೀಮತಿ ಕೋಕಿಲ, ಶ್ರೀಮತಿ ಚಿತ್ರಾರವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕು. ರಕ್ಷಾ (ಎಂಟನೇ ತರಗತಿ) ಸ್ವಾಗತಿಸಿ, ಕು. ಚಿನ್ಮಯಿ(9ನೇ ತರಗತಿ) ವಂದಿಸಿದರು, ಕು. ಇಂದುಮತಿ(9ನೇ ತರಗತಿ) ಕಾರ್ಯಕ್ರಮ ನಿರೂಪಿಸಿದರು.

Related posts

ಜ.22: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಬೆಳ್ತಂಗಡಿ ತಾಲೂಕಿನಾದ್ಯಂತ ಸಂಭ್ರಮಿಸಲು ಸಜ್ಜಾಗಿರುವ ರಾಮಭಕ್ತರು

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಾಧನೆಗೆ ವಿಮಾ ಕ್ಷೇತ್ರದ ಗೌರವ

Suddi Udaya

ಬಂಟರ ಯಾನೆ ನಾಡವರ ಸಂಘ ಮಡಂತ್ಯಾರು ವಲಯದ ಗರ್ಡಾಡಿ, ಪಡಂಗಡಿ ಗ್ರಾಮಗಳ ಗ್ರಾಮ ಸಮಿತಿ ರಚನೆ

Suddi Udaya

ಕುದ್ರಾಯ ಸಮೀಪದ ಬೋಳಿಯಾರುನಲ್ಲಿ ಮೋರಿಯ ತಡೆಗೋಡೆ ಕುಸಿತ

Suddi Udaya

ಅ.31: ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ದೀಪಾವಳಿ ದೋಸೆಹಬ್ಬ ಹಾಗೂ ಗೋ ಪೂಜಾ ಉತ್ಸವ

Suddi Udaya

ಪಟ್ರಮೆ : ಮುಂಡೂರುಪಳಿಕೆ ನಿವಾಸಿ ವಸಂತಿ ನಿಧನ

Suddi Udaya
error: Content is protected !!