38.6 C
ಪುತ್ತೂರು, ಬೆಳ್ತಂಗಡಿ
March 6, 2026
ವರದಿ

ಉಜಿರೆ : ಶ್ರೀ ಧ.ಮ. ಕಾಲೇಜು ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ – ವಿಶೇಷ ಸಾಧಕರಿಗೆ ಸನ್ಮಾನ – ಚಿಗುರು ಪತ್ರಿಕೆ ಅನಾವರಣ

ಉಜಿರೆ : ಇಲ್ಲಿಯ ಶ್ರೀ ಧ.ಮ. ಕಾಲೇಜು ವಾರ್ಷಿಕೋತ್ಸವ, ವಿಶೇಷ ಸಾಧಕರಿಗೆ ಸನ್ಮಾನ – ಚಿಗುರು ಪತ್ರಿಕೆ ಅನಾವರಣ ಕಾರ್ಯಕ್ರಮವು ಮಾ.30ರಂದು ನಡೆಯಿತು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಪ್ರೋ. ಪಿ.ಎಲ್. ಧರ್ಮ ಉಪಕುಲಪತಿಗಳು ಚಿಗುರು ಪತ್ರಿಕೆ ಅನಾವರಣಗೊಳಿಸಿ ಮಾತನಾಡಿ ತಂತ್ರಜ್ಞಾನ ಹೇಗಿರಬೇಕು ಎಂಬುವುದನ್ನು ಪ್ರಯೋಗ ಮಾಡಿದ್ದು ದಿ. ಯಶೋವರ್ಮ ರವರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಸಹನೆ ಹಾಗೂ ಸಹಬಾಳ್ವೆಯನ್ನು ಕಲಿಸಿ ಕೊಡುತ್ತದೆ ಎಂದರು.ಅತಿಥಿ ಅಭ್ಯಾಗತರಿಂದ ನಿವೃತ್ತ ಪ್ರಾಧ್ಯಾಪಕರಿಗೆ, ರಾಂಕ್ ವಿಜೇತರಿಗೆ, ಪಿ.ಹೆಚ್.ಡಿ ಮತ್ತು ವಿಶೇಷ ಸಾಧಕ ಅಧ್ಯಾಪಕರಿಗೆ, ವಿಶೇಷ ಸಾಧಕ ವಿದ್ಯಾರ್ಥಿಗಳಿಗೆ, ಎನ್.ಸಿ.ಸಿ /ಎನ್.ಎಸ್.ಎಸ್ / ಕ್ರೀಡಾ ವಿಭಾಗದ ರಾಷ್ಟ್ರಮಟ್ಟದ ಸಾಧಕರಿಗೆ ಸನ್ಮಾನ ಮಾಡಲಾಯಿತು.

ವೇದಿಕೆಯಲ್ಲಿ ಡಿ. ಹರ್ಷೇಂದ್ರ ಹೆಗ್ಡೆ, ಪ್ರಾಂಶುಪಾಲರಾದ ಡಾ.ಬಿ.ಎ. ಕುಮಾರ ಹೆಗ್ಡೆ, ಉಪಪ್ರಾಂಶುಪಾಲರಾದ ಶಶಿಶೇಖರ ಕಾಕತ್ಕರ್ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕ ಡಾ. ಶ್ರೀಧರ ಭಟ್ಟ್ ನಿರೂಪಿಸಿ, ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಡಾ.ಬಿ.ಎ. ಕುಮಾರ ಹೆಗ್ಡೆ ಸ್ವಾಗತಿಸಿ ವರದಿ ವಾಚನ ಮಾಡಿದರು. ಉಪಪ್ರಾಂಶುಪಾಲರಾದ ಶಶಿಶೇಖರ ಕಾಕತ್ಕರ್ ಧನ್ಯವಾದವಿತ್ತರು.

Related posts

ಕಳಿಯ ಗ್ರಾ.ಪಂ. ನಿಂದ ಪ.ಜಾತಿ ಮತ್ತು ಪ.ಪಂ ಕುಟುಂಬದವರಿಗೆ ಫ್ಯಾನ್ ವಿತರಣೆ

Suddi Udaya

ಮೇ 9 ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ

Suddi Udaya

ದ.ಕ. , ಉಡುಪಿ ಜಿಲ್ಲೆಯ ವಕೀಲರ ವೇದಿಕೆ ಬೆಂಗಳೂರು ಇದರ ಕಾರ್ಯದರ್ಶಿಯಾಗಿ ಬೆಳ್ತಂಗಡಿಯ ಶೈಲಾ ರಮೇಶ್ ಆಯ್ಕೆ

Suddi Udaya

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ರೈತ ಸದಸ್ಯರ ಅವಶ್ಯಕತೆಗಳನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ: ಎನ್ ಸುಧಾಕರ ಭಂಡಾರಿ ರೂ 272.37 ಕೋಟಿ ವ್ಯವಹಾರ,ರೂ. 89 ಲಕ್ಷ ಲಾಭ, ಸದಸ್ಯರಿಗೆ ಶೇ 12 ಡಿವಿಡೆಂಟ್

Suddi Udaya

ಜ. 24- ಫೆ. 2 ರವರಿಗೆ ಕಾಜೂರು ಉರೂಸ್ ಮಹಾ ಸಂಭ್ರಮ : ಜ. 30 ಬ್ರಹತ್ ಝಿಕ್ರ್ ಮಜ್ಲಿಸ್ ಹಾಗೂ ಮುಸಾಫಿರ್ ಖಾನ ಕಟ್ಟಡ ಉದ್ಘಾಟನೆ; ಫೆ. 2 ಉರೂಸ್ ಸಮಾರೋಪ- ಮಹಾ ಅನ್ನದಾನ

Suddi Udaya

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ವಿನಯಚಂದ್ರ ಗೌಡ ಆಯ್ಕೆ

Suddi Udaya
error: Content is protected !!