ಅಳದಂಗಡಿ: ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಾ 31 ರಿಂದ ಎ.04 ರವರೆಗೆ ನಡೆಯಲಿದ್ದು ಮೊದಲ ಅಂಗವಾಗಿ ವೈಭವದ ಹಸಿರುವಾಣಿ ಮೆರವಣಿಗೆಗೆ ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ಚಾಲನೆ ದೊರೆಯಿತು.
ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ತಾಲೂಕಿನ ವಿವಿಧ ಕುಣಿತಾ ಭಜನಾ ತಂಡಗಳಿಂದ ರಸ್ತೆಯುದ್ದಕ್ಕೂ ಕುಣಿತಾ ಭಜನೆ,ವಿವಧ ವೇಷಭೂಷಣಗಳು, ವಿವಿಧ ಗ್ರಾಮಗಳಿಂದ ಆಗಮಿಸಿದ ಹಸಿರುವಾಣಿ ಯನ್ನು ನಾವರ ದೇವಸ್ಥಾನಕ್ಕೆ ತಂದು ದೇವರಿಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ, ಜೀರ್ಣೋದ್ಧಾರ ಸಮಿತಿ ಗೌರವ ಅದ್ಯಕ್ಷ ರವಿರಾಜ್ ಹೆಗ್ಡೆ,ಅಧ್ಯಕ್ಷ ರವಿರಾಜ ಕೆಲ್ಲ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಿತ್ಯಾನಂದ ಎನ್ ನಾವರ,ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಆರ್ಥಿಕ ಸಮಿತಿ ಸಂಚಾಲಕ ಸದಾನಂದ ಎಂ ನಾವರ,ಕಾರ್ಯದರ್ಶಿ ವಿಜಯ್ ಕುಮಾರ್ ಜೈನ್,ಪ್ರಮುಖರಾದ ಶಶಿಧರ ಡೋಂಗ್ರೆ, ಬೇಬಿ ಪೂಜಾರಿ ಪುಣ್ಕೆತ್ಯಾರು, ಅಜಿತ್ ಕುಮಾರ್ ಜೈನ್,ರಾಕೇಶ್ ಹೆಗ್ಡೆ ಬಳಂಜ, ಗಣೇಶ್ ದೇವಾಡಿಗ ಬಳಂಜ, ಸಂತೋಷ್ ಹೆಗ್ಡೆ, ಸುದೀರ್ ಸುವರ್ಣ,ವಿಶ್ವನಾಥ ಕುದ್ಯಾಡಿ,ರವಿ ಶೆಟ್ಟಿ, ರವಿ ಪೂಜಾರಿ ಹಾರಡ್ಡೆ,ರವಿ ಭಟ್ ನಾವರ, ನವೀನ್ವಕುಮಾರ್ ನಾವರ, ಸುಶೀಲ ಹೆಗ್ಡೆ,ಗಿರಿಜಾ ಅಶೋಕ್,ಮಲ್ಲಿಕಾ ದೇವಾಡಿಗ, ಪುಷ್ಪಾವತಿ ಎನ್ ನಾವರ,ಶುಭಕರ ಪೂಜಾರಿ, ಉಮೇಶ್ ದುಗ್ಗಚ್ಚಲ್,ಸುಂದರ ಶೆಟ್ಟಿ ಸುಲ್ಕೇರಿ, ಪಿ.ಹೆಚ್.ನಿತ್ಯಾನಂದ ಶೆಟ್ಟಿ, ಆನಂದ ಓಡಿಮಾರ್, ಹೇಮಂತ್ ಕಟ್ಟೆ, ವೀರೇಂದ್ರ ಕುಮಾರ್,ಪ್ರವೀಣ್ ಕುಮಾರ್ ಹೆಚ್.ಎಸ್. ಕರುಣಾಕರ ಹೆಗ್ಡೆ ಬೊಕ್ಕಸ,ಜಯ ಪೂಜಾರಿ ಕೊರಲ್ಲ,ಶೇಖರ್ ಎನ್, ಸದಾನಂದ ಕುದ್ಯಾಡಿ, ಪ್ರಶಾಂತ್ ಶೆಟ್ಟಿ ಬೊಳ್ಳಿಮಾರ್, ಮೋಹನ್ ದಾಸ್ ಹಾಗೂ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.