April 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕಡಿರುದ್ಯಾವರ: ಕಾನರ್ಪ ಪುರುಷರ ಬಳಗದ ವತಿಯಿಂದ ಪುರುಷರ ರಾಶಿ ಪೂಜೆ

ಕಡಿರುದ್ಯಾವರ: ಕಾನರ್ಪ ಪುರುಷರ ಬಳಗದ ವತಿಯಿಂದ ಪುರುಷರ ರಾಶಿ ಪೂಜೆ ಕಾರ್ಯಕ್ರಮವು ಕಾನರ್ಪ ಓಬಯ್ಯಗೌಡರ ಮನೆಯಂಗಳದಲ್ಲಿ ನಡೆಯಿತು.


ತುಳುನಾಡ ಜನಪದ ಕಲೆಯಲ್ಲಿ ಒಂದಾದ ಈ ಪುರುಷರ ಕುಣಿತವು ಈ ಪರಿಸರದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಹಲವಾರು ವರ್ಷಗಳಿಂದಲೂ ನಡೆಯುತ್ತಾ ಬರುತ್ತಿದೆ. ಸುಗ್ಗಿ ತಿಂಗಳ ಐದಾರು ದಿನಗಳಲ್ಲಿ ನಡೆಯುವ ಈ ಕುಣಿತವು ತನ್ನ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ದಿಮಿಸೋಲೆ ಹೇಳುತ್ತಾ ಭೇಟಿ ನೀಡಿ ಪುರುಷರ ಬಳಗವು ವಿವಿಧ ವೇಷಗಳನ್ನು ತೊಟ್ಟು ಮನೆಯ ಮುಂದೆ ತನ್ನ ಹಾಸ್ಯ ತುಣುಕುಗಳ ಪ್ರದರ್ಶನ ನೀಡುತ್ತಾ ಮುಂದೆ ಸಾಗುತ್ತಾರೆ.


ಪ್ರತಿ ವರ್ಷದಂತೆ ಈ ವರ್ಷವು ಸುಗ್ಗಿ ತಿಂಗಳಲ್ಲಿ ಒಂದು ದಿನ ವಿವಿಧ ವೇಷ ಧರಿಸಿ ಕಾನರ್ಪ ಪರಿಸರದ ಮನೆ ಮನೆಗೆ ಭೇಟಿ ನೀಡಿ ಪುರುಷರ ಕುಣಿತ ಪ್ರದರ್ಶನ ನೀಡಲಾಯಿತು ಹಾಗೂ ಪುರುಷರ ಬಳಗದ ಸಮಿತಿ ನಿರ್ಣಯಿಸಿದಂತೆ ಕಾನರ್ಪ ಓಬಯ್ಯ ಗೌಡರ ಮನೆಯಂಗಳದಲ್ಲಿ ಪುರುಷರ ರಾಶಿ ಪೂಜೆ ನೆರವೇರಿಸಲಾಯಿತು.
ಈ ರಾಶಿ ಪೂಜಾ ಕಾರ್ಯಕ್ರಮದಲ್ಲಿ ಊರ-ಪರವೂರ ನೂರಾರು ಭಕ್ತರು ಪಾಲ್ಗೊಂಡು ದೇವರ ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಲೋಕಯ್ಯ ಗೌಡ ಜಾರಿಗೆದಡಿ, ಸಂಜೀವ ಗೌಡ ಕೋಡಿಯೆಲ್, ಜನಾರ್ಧನ ಕಾನರ್ಪ, ರಾಘವೇಂದ್ರ ಭಟ್ ಕೋಡಿ, ಕಡಿರುದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಗೌಡ, ಓಬಯ್ಯಗೌಡ, ಸುರೇಶ್ ಮಾಲ್ನ, ರಾಜೇಶ್ ಕೋಡಿ, ಆನಂದ ಮುಳಿಹಿತ್ಲು, ಚೆನ್ನ ಕೇಶವ, ಗುರುಪ್ರಸಾದ್ ಕಾನರ್ಪ, ಸುದರ್ಶನ ಕನಪ್ಪಾಡಿ, ಜಾರಪ್ಪ ಗೌಡ ಬೊಟ್ಟು, ಸುದರ್ಶನ ಶೀರಬೆಟ್ಟು, ರವೀಂದ್ರ ಪೂಜಾರಿ, ನೀಲಯ್ಯ ಗೌಡ ಮಾಲ್ನ, ಜಗದೀಶ ಉಂಗಿಲಪಾದೆ, ಉಮೇಶ್ ಕೋಡಿ, ಕಮಲಾಕ್ಷ ಕೋಡಿ, ಎಲ್ಯಣ್ಣ ಗೌಡ ಪೆಲತ್ತಡಿ, ರಾಮಚಂದ್ರ ಪಣಿಕ್ಕಲ್, ಸುರೇಶ್ ಹಿಮರಡ್ಡ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

Related posts

ಜೆಸಿಐ ಕೊಕ್ಕಡ ಕಪಿಲಾ ವತಿಯಿಂದ ಸ.ಕಿ.ಪ್ರಾ. ಶಾಲೆಯಲ್ಲಿ ಜನಗಣಮನ ಬರವಣಿಗೆ ಸ್ಪರ್ಧೆ

Suddi Udaya

ಮುಂಡಾಜೆಯಲ್ಲಿ ಕೂಲಿ ಕೆಲಸಕ್ಕೆ ಹೋದ ಮಹಿಳೆ ಕುಸಿದು ಬಿದ್ದು ಮೃತ್ಯು

Suddi Udaya

ಅಂಡೆತಡ್ಕ : ಕರಾಯ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಎಸ್.ಎಸ್.ಎಲ್.ಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಅಭಿಷೇಕ್ ಗೆ ಬೆಳ್ತಂಗಡಿ ವಕೀಲರ ಸಂಘದಿಂದ ಸನ್ಮಾನ

Suddi Udaya

ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ರೂ. 343.74 ಕೋಟಿ ಅನುದಾನ ಬಿಡುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

Suddi Udaya

ಭಾರತೀಯ ಜೈನ್ ಮಿಲನ್ ವಲಯ-8: ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ ಉದ್ಘಾಟನೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ